ಕರಾವಳಿಕೊಡಗು

ಮಡಿಕೇರಿ:ಆಸ್ತಿ ವಿಚಾರಕ್ಕೆ ತಮ್ಮನನ್ನೇ ಗುಂಡಿಟ್ಟು ಕೊಂದ ಅಣ್ಣ ,ಆರೋಪಿ ಅಣ್ಣನನ್ನು ಬಂಧಿಸಿದ ಪೊಲೀಸರು

185

ನ್ಯೂಸ್‌ ನಾಟೌಟ್‌: ತಮ್ಮನನ್ನೇ ಗುಂಡಿಟ್ಟು ಅಣ್ಣ ಹತ್ಯೆ ಮಾಡಿರುವ ಭಯಾನಕ ಘಟನೆಯೊಂದು ಕೊಡಗಿನ ಪೊನ್ನಂಪೇಟೆ ಬಳಿಯ ಬೇಗೂರಿನಲ್ಲಿ ಶನಿವಾರ ರದಿಯಾಗಿತ್ತು.ಇದೀಗ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಆರೋಪಿ ಅಣ್ಣ ಮಲ್ಲಂಡ ಸುಬ್ರಮಣಿಯನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ.

‘ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಅಣ್ಣ ಸುಬ್ರಮಣಿ ತಮ್ಮ ಪ್ರಕಾಶ್‌ನನ್ನು ತಮ್ಮ ಮನೆಯ ಎದುರಿನ ಕಾಫಿ ತೋಟದಲ್ಲಿ ಗುಂಡು ಹೊಡೆದು ಹತ್ಯೆ ಮಾಡಿದ್ದ. ಈ ಸಂದರ್ಭದಲ್ಲಿ ಮೃತ ಪ್ರಕಾಶ್ ಅವರ ಜೊತೆಯಲ್ಲಿದ್ದ ಮಗ ಧ್ಯಾನ್ ಅವರಿಗೂ ಗುಂಡೇಟು ಬಿದ್ದಿತ್ತು. ಇದೀಗ ಮಗ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು ತಿಳಿದು ಬಂದಿದೆ.

ಪೊನ್ನಂಪೇಟೆ ಸಬ್ ಇನ್‌ಸ್ಪೆಕ್ಟರ್ ನವೀನ್, ಗೋಣಿಕೊಪ್ಪಲು ಸಬ್ ಇನ್‌ಸ್ಪೆಕ್ಟರ್ ರೂಪಾದೇವಿ ಬಿರಾದಾರ್ ಆರೋಪ ಸುಬ್ರಮಣಿ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

See also  ಸುಳ್ಯ: ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಯುವಕ; ಆರೋಪಿ ನಾಪತ್ತೆ;ಬಂಧನಕ್ಕೆ ಬಲೆ ಬೀಸಿದ ಪೊಲೀಸರು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget