ನ್ಯೂಸ್ ನಾಟೌಟ್ : ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ಉತ್ಸವ ನಡಿತಿದೆ .ಇನ್ನು ಕೆಲವೇ ದಿನಗಳು ಬಾಕಿ ಇದ್ದು ಈ ಹಿನ್ನಲೆಯಲ್ಲಿ ಲಕ್ಷಾಂತರ ಭಕ್ತರು ಬಂದು ಪವಿತ್ರ ನದಿಯಲ್ಲಿ ಮಿಂದೇಳುತ್ತಿದ್ದಾರೆ.ವಿಶ್ವದಲ್ಲೆ ಅತಿದೊಡ್ಡ ಆಧ್ಯಾತ್ಮಿಕ ಕಾರ್ಯಕ್ರಮವೆಂದು ಪರಿಗಣಿಸಲ್ಪದೆ.ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸಂಗಮಿಸುವ ಪವಿತ್ರ ಸ್ಥಳದಲ್ಲಿ ಪವಿತ್ರ ಸ್ನಾನ ಮಾಡಿದರೆ ಸಕಲ ಪಾಪಗಳೆಲ್ಲವೂ ಪರಿಹಾರವಾಗುತ್ತದೆ ಎನ್ನುವ ನಂಬಿಕೆಯೂ ಇದೆ. ಇದೀಗ ಇಲ್ಲಿ ಒಬ್ಬ ವ್ಯಕ್ತಿ ಮಾತ್ರವಲ್ಲದೇ ನಾಯಿ ಕೂಡ ಪವಿತ್ರ ಸ್ನಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಭಕ್ತರೊಬ್ಬರು ಪವಿತ್ರ ಸ್ನಾನ ಮಾಡುವುದನ್ನು ತೋರಿಸಲಾಗಿದೆ. ಇವರೊಂದಿಗೆ ಈ ವೀಡಿಯೊದಲ್ಲಿ ಬೀಗಲ್ ನಾಯಿ ಕೂಡ ಸಂಗಮದಲ್ಲಿ ಸ್ನಾನ ಮಾಡುತ್ತಿದೆ. ಶ್ವಾನ ಭಕ್ತಿಯಿಂದ ನದಿಗೆ ಇಳಿದು ತನ್ನ ಮಾಲೀಕರೊಂದಿಗೆ ಶಾಂತಿಯುತವಾಗಿ ನಡೆದು ಸ್ನಾನ ಮಾಡಿ ಮಿಂದೆದ್ದಿದೆ.ಈ ವಿಡಿಯೋ ಮನಮೋಹಕವಾಗಿದ್ದು,ಇದು ಸಾರ್ವಜನಿಕ ಪ್ರಶಂಸೆಯನ್ನು ಗಳಿಸಿದೆ. ಅವನು ನೀರಿನಲ್ಲಿ ಮುಳುಗಿ ಪ್ರಾರ್ಥಿಸುತ್ತಿದ್ದಾಗ ಹತ್ತಿರದಲ್ಲಿ ಸದ್ದಿಲ್ಲದೆ ನಿಂತಿದ್ದ ನಾಯಿಯ ವರ್ತನೆ ಸಾಕಷ್ಟು ಗಮನ ಸೆಳೆದಿದೆ. ಸ್ನಾನ ಮುಗಿಸಿದ ನಂತರ, ಭಕ್ತನು ತನ್ನ ನಾಯಿಯನ್ನು ನಿಧಾನವಾಗಿ ಮುಟ್ಟಿ ಪ್ರೀತಿಯನ್ನು ತೋರಿಸಿದ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲಿ ನೆರೆದ ಭಕ್ತರು ಮತ್ತು ಅಲ್ಲಿದ್ದ ಪೊಲೀಸರು ಇದನ್ನು ನೋಡಿ ಖುಷಿ ಪಟ್ಟರು.
ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಭಕ್ತ, “ನನಗೆ ನಾಯಿಯನ್ನು ಕರೆದುಕೊಂಡು ಹೋಗುವ ಯಾವುದೇ ಯೋಜನೆ ಇರಲಿಲ್ಲ, ನಾನು ಅದನ್ನು ಮನೆಯಲ್ಲಿಯೇ ಬಿಟ್ಟು ಹೋಗಲು ಬಯಸಿದ್ದೆ. ಆದರೆ ನಾನು ಕಾರು ಹತ್ತುತ್ತಿದ್ದಂತೆ… ಅದರ ಮುಖದಲ್ಲಿ ಭಾವನೆ ಬದಲಾಯ್ತು.. ಹೀಗಾಗಿ ನಾನು, ನನ್ನ ಮುದ್ದಿನ ಶ್ವಾನವನ್ನು ಜತೆಗೆ ಕರೆದುಕೊಂಡು ಬಂದಿದ್ದೇನೆ ಹರ್ ಹರ್ ಮಹಾದೇವ್!”ಎಂದು ಹೇಳಿದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶ್ವಾನದ ಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
View this post on Instagram