ಕರಾವಳಿ

ಉಡುಪಿ:ಲಕ್ಷಾಂತರ ರೂ. ಮೌಲ್ಯದ ಮೀನು, 7500 ಲೀ.ಡಿಸೇಲ್‌ ದರೋಡೆ..! 7 ಮಂದಿ ಮೀನುಗಾರರ ಅಪಹರಣ ಮಾಡಿದವರು ಯಾರು?

ನ್ಯೂಸ್‌ ನಾಟೌಟ್‌ :ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನತೆ ಬೆಚ್ಚಿ ಬೀಳಿಸುವ ಘಟನೆ ಬಗ್ಗೆ ವರದಿಯಾಗಿದೆ.ಇದೀಗ ಮೀನಿಲ್ಲದೇ ಮೀನುಗಾರರ ಸ್ಥಿತಿ ಅತಂತ್ರದಲ್ಲಿರುವಾಗಲೇ ಮೀನುಗಾರರ ಅಪಹರಣವಾಗಿದೆ ಅನ್ನೋ ವಿಚಾರ ಆ*ಘಾ*ತವನ್ನುಂಟು ಮಾಡಿದೆ.

ಮೀನುಗಾರರು ಮೀನುಗಾರಿಕೆಗೆಂದು ಹೋಗಿದ್ದರು.ಈ ವೇಳೆ ಅವರು ವಾಪಾಸ್ಸಾಗುತ್ತಿದ್ದಂತೆ ಆಳಸಮುದ್ರ ಬೋಟನ್ನು ತಡೆದು ನಿಲ್ಲಿಸಿ ಬೋಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೀನು, ಡೀಸೆಲ್‌ ಸಹಿತ 7 ಮಂದಿ ಮೀನುಗಾರರನ್ನು 25 ಜನರ ತಂಡ ಅಪಹರಿಸಿದ ಘಟನೆ ಭಟ್ಕಳದ ಮಾವಿನ ಕುರ್ವೆ ಬಂದರಿನಲ್ಲಿ ನಡೆದಿದೆಯೆಂದು ವರದಿಯಾಗಿದೆ.

ಮಲ್ಪೆಯ ಚೇತನ್‌ ಸಾಲ್ಯಾನ್‌ ಅವರಿಗೆ ಸೇರಿದ ಕೃಷ್ಣನಂದನ ಆಳಸಮುದ್ರ ಬೋಟಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.ಅದರಲ್ಲಿ ಮೀನುಗಾರಿಕೆಗೆ ತೆರಳಿದ್ದ ನಾಗರಾಜ್‌ ಹರಿಕಾಂತ್‌, ನಾಗರಾಜ್‌ ಎಚ್‌., ಅರುಣ್‌ ಹರಿಕಾಂತ ಅಂಕೋಲ, ಅಶೋಕ ಕುಮಟಾ, ಕಾರ್ತಿಕ ಹರಿಕಾಂತ ಮಂಕಿ, ಚಂದ್ರಕಾಂತ ಹರಿಕಾಂತ ಉಪ್ಪುಂದ, ಸುಬ್ರಹ್ಮಣ್ಯ ಖಾರ್ವಿ ಅವರನ್ನು ಬಂಧನದಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.

ಫೆ. 26ರ ತಡರಾತ್ರಿ ಮೀನುಗಾರಿಕೆ ಮುಗಿಸಿ ಮಲ್ಪೆ ಬಂದರು ಕಡೆ ಬರುತ್ತಿರುವಾಗ ಭಟ್ಕಳ ಸಮೀಪ ಬೋಟಿನ ಬಲೆ ಫ್ಯಾನಿಗೆ ಬಿದ್ದು ಎಂಜಿನ್‌ ಸ್ಥಗಿತಗೊಂಡು ಬೋಟು ನಿಂತಿತ್ತು. ಈ ಸಮಯದಲ್ಲಿ ಸುಮಾರು 25 ಮಂದಿ ಒಮ್ಮಿಂದೊಮ್ಮೆಲೆ ಬಂದು ಅಕ್ರಮಣಗೈದು ಬೋಟನ್ನು ತೀರ ಪ್ರದೇಶಕ್ಕೆ ಎಳೆದೊಯ್ದಿದ್ದಾರೆ. ಬೋಟಿನಲ್ಲಿದ್ದ ಸುಮಾರು 8 ಲಕ್ಷ ರೂ. ಮೌಲ್ಯದ ಮೀನು, 7,500 ಲೀ ಡೀಸೆಲ್‌ ಅನ್ನು ದೋಚಿದ್ದಲ್ಲದೆ ಬೋಟಿನಲ್ಲಿದ್ದ 7 ಮಂದಿ ಮೀನುಗಾರರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಬೋಟಿನ ಮೀನುಗಾರರ ಮೊಬೈಲಿಗೆ ಕರೆ ಮಾಡಿದಾಗ ಸ್ವಿಚ್‌ಆಫ್‌ ಅಗಿದ್ದು ಅಪಹರಣಕಾರರು ಮೀನುಗಾರರನ್ನು ಬಂಧನದಲ್ಲಿರಿಸಿ ಮಾನಸಿಕ ಮತ್ತು ದೈಹಿಕ ಹಿಂ**ಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕಲ್ಯಾ ಮತ್ತು ಪಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ವಿ ಸುನೀಲ್ ಕುಮಾರ್ ಚುನಾವಣಾ ಪ್ರಚಾರ ಸಭೆ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಚಿಂತನೆ

ಬಂಟ್ವಾಳ: ಹಾಡಹಗಲೇ ಬೈಕ್ ನಲ್ಲಿ ಬಂದು ಮಹಿಳೆಯ ಮಾಂಗಲ್ಯ ಸರ ಕದ್ದು ಎಸ್ಕೇಪ್, ಹಿಂಬದಿ ಸವಾರನ ಕೃತ್ಯಕ್ಕೆ ಬೆಚ್ಚಿ ಬಿದ್ದ ಜನ

ಸೋಣಂಗೇರಿಯಲ್ಲಿ 200 ಕೆವಿಎ ಆನ್ ಹೆಚ್‌ಟಿ ಸಬ್‌ ಸ್ಟೇಷನ್‌ಗೆ ಡಾ| ಕೆ.ವಿ ಚಿದಾನಂದ ಚಾಲನೆ