ಸುಳ್ಯ: ತೊಡಿಕಾನ ಶ್ರೀಮಲ್ಲಿಕಾರ್ಜುನ ದೇವರ ಭಕ್ತಿಗೀತೆಯ ವಿಡಿಯೋ ಬಿಡುಗಡೆ ಕಾರ್ಯಕ್ರಮ ಶ್ರೀಕ್ಷೇತ್ರದಲ್ಲಿ ನಡೆಯಿತು. ಕ್ಷೇತ್ರದ ಪ್ರಧಾನ ಅರ್ಚಕರಾದ ಕೇಶವಮೂರ್ತಿ ಭಕ್ತಿಗೀತೆಯ ವಿಡಿಯೋವನ್ನು ಬಿಡುಗಡೆಗೊಳಿಸಿದರು. ಸರಿಗಮಪ ಖ್ಯಾತಿಯ ಜನ್ಯ ಪ್ರಸಾದ್ ಅನಂತಾಡಿ ಇವರ ಧ್ವನಿಯಲ್ಲಿ ಹಾಡುಗಳು ಮೂಡಿ ಬಂದಿವೆ. ಪ್ರಾಯೋಜಕರಾದ ಅರಂತೋಡು ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘ ಇದರ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ,ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಉಳುವಾರು, ಪ್ರಧಾನ ಅರ್ಚಕರಾದ ಶ್ರೀ ಕೇಶವ ಮೂರ್ತಿ, ಉಮಾಶಂಕರ ,ಜನಾರ್ಧನ ಬಾಳೆಕಜೆ,ಆನಂದ ಕಲ್ಲುಗದ್ದೆ, ಗಾಯಕಿ ಜನ್ಯಪ್ರಸಾದ್, ತೀರ್ಥಪ್ರಸಾದ್, ಮಾಲತಿ,ಡಾ. ರೂಪಲತಾ ಮತ್ತಿತರರು ಉಪಸ್ಥಿತರಿದ್ದರು.