ರಾಜಕೀಯವೈರಲ್ ನ್ಯೂಸ್

ಎದೆಯ ಮೇಲೆ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಟ್ಯಾಟೂ, ಬೆನ್ನಿನ ಮೇಲೆಲ್ಲಾ ನಡೆದು ಬಂದ ಹಾದಿಯ ವಿವರ..! ಯಾರೀತ ವಿಚಿತ್ರ ಅಭಿಮಾನಿ..?

237

ನ್ಯೂಸ್ ನಾಟೌಟ್: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಮಗ ಪಂಚಾಯತ್ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಮಾನಯೊಬ್ಬ ತಮ್ಮ ಎದೆಯ ಮೇಲೆ ಈ ಇಬ್ಬರು ನಾಯಕರ ಭಾವಚಿತ್ರಗಳ ಟ್ಯಾಟೂ ಹಾಕಿಸಿಕೊಂಡಿರುದು ಈಗ ಎಲ್ಲೆಡೆ ಟ್ರೆಂಡ್ ಆಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಜಿಲಕೇರಿ ಗ್ರಾಮದ ಹಣಮಂತ ಹೊಸಮನಿ ಟ್ಯಾಟೂ ಹಾಕಿಸಿಕೊಂಡವರು ಎನ್ನಲಾಗಿದ್ದು.

ತಲೆಯ ಮೇಲೆ ಕಾಂಗ್ರೆಸ್‌ನ ಹಸ್ತದ ಚಿಹ್ನೆ ಹಾಗೂ ಖರ್ಗೆ ಹೆಸರಿನ ಹೇರ್ ಕಟ್ ಮಾಡಿಸಿದ್ದಾರೆ. ಹಣಮಂತ ಬೆನ್ನಿನ ತುಂಬ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಜೀವನದಲ್ಲಿ ನಡೆದುಬಂದ ಹಾದಿಯ ಪ್ರಮುಖ ಘಟ್ಟಗಳ ಟ್ಯಾಟೂ ಅಚ್ಚಾಗಿಸಿದ್ದು ವಿಚಿತ್ರವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ತಾನು ಖರ್ಗೆ ಅಭಿಮಾನಿ ಎಂದು ಪ್ರಚಾರ ಮಾಡುತ್ತಿದ್ದು, ಗುರುವಾರ ನಗರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾದ ಹಣಮಂತ, ತನ್ನ ಅಭಿಮಾನವನ್ನು ವ್ಯಕ್ತಪಡಿಸಿದರು. ‘ಇಂತಹವರ ಋಣವನ್ನು ಹೇಗೆ ತಿರಿಸಬೇಕು’ ಎಂದು ಭಾವನಾತ್ಮಕವಾಗಿ ಪ್ರಿಯಾಂಕ್ ಹೇಳಿಕೊಂಡಿದ್ದಾರೆ. ಈಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

See also  ಬ್ಲ್ಯಾಕ್ ಮೇಲ್ ಗೆ ಹೆದರಿ ಹಸೆಮಣೆ ಏರಬೇಕಿದ್ದ ಶಿಕ್ಷಕಿ ಆತ್ಮಹತ್ಯೆ..! ಪೋಷಕರು ಮದುವೆ ಸಾಮಗ್ರಿಗಳನ್ನು ತರಲು ಪೇಟೆಗೆ ಹೋಗಿದ್ದ ವೇಳೆ ಘಟನೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget