ರಾಜಕೀಯವೈರಲ್ ನ್ಯೂಸ್

ಸಭೆಯ ವೇಳೆ ಅಸ್ವಸ್ಥಗೊಂಡಿದ್ದ ಖರ್ಗೆ, ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ, ಮೋದಿಯನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸುವವರೆಗೂ ನಾನು ಸಾಯುವುದಿಲ್ಲ ಎಂದ ಖರ್ಗೆ..!

ನ್ಯೂಸ್‌ ನಾಟೌಟ್‌: ಜಮ್ಮುವಿನಲ್ಲಿ ನಡೆದ ಸಭೆಯಲ್ಲಿ ವೇದಿಕೆ ಮೇಲೆ ಅಸ್ವಸ್ಥಗೊಂಡಿದ್ದ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಆರೋಗ್ಯ ಕುರಿತು ಪ್ರಧಾನಿ ಮೋದಿ ಕರೆ ಮಾಡಿ ವಿಚಾರಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ನಡೆಯಲಿರುವ ಮೂರನೇ ಹಂತದ ಮತದಾನಕ್ಕೆ ಭಾನುವಾರ ಪ್ರಚಾರ ಅಂತ್ಯಗೊಂಡಿತ್ತು, ಅಂದು ಸಭೆಯನ್ನುದ್ದೇಶಿಸಿ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಿರುವಾಗ ಅಸ್ವಸ್ಥಗೊಂಡಿದ್ದರು., ಬಳಿಕ ಮಾತು ಮುಂದುವರೆಸಿ ‘‘ನನಗೆ ಈಗ 83 ವರ್ಷ, ಮೋದಿಯನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸುವವರೆಗೂ ನಾನು ಸಾಯುವುದಿಲ್ಲ’’ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಕರೆ ಮಾಡಿ ಖರ್ಗೆಯವರು ಆರೋಗ್ಯ ವಿಚಾರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಗಣಿಗಾರಿಕೆ ಮತ್ತು ಮದ್ಯದ ಒಪ್ಪಂದಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಹೊರಗಿನವರಿಗೆ ಪ್ರಾಬಲ್ಯ ಸಾಧಿಸಲು ಬಿಜೆಪಿ ಅವಕಾಶ ನೀಡುತ್ತಿದೆ ಎಂದು ಖರ್ಗೆ ಆರೋಪಿಸಿದರು.

ಕೆಲಕಾಲ ಅವರನ್ನು ವೇದಿಕೆಯ ಮೇಲೆ ಕೂರಿಸಲಾಯಿತು. ಸ್ವಲ್ಪ ಹೊತ್ತು ಕುಳಿತ ನಂತರ ಮತ್ತೊಮ್ಮೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಅವರು ನಂತರ ವೇದಿಕೆ ಮೇಲೆ ನಿಂತು ಭಾಷಣ ಆರಂಭಿಸಿ ಜಮ್ಮು-ಕಾಶ್ಮೀರ ರಾಜ್ಯ ಸ್ಥಾನಮಾನ ಮರುಸ್ಥಾಪಿಸಲು ಹೋರಾಟ ನಡೆಸುತ್ತೇವೆ ಎಂದರು.

ಜಮ್ಮು ಮತ್ತು ಕಾಶ್ಮೀರದ ಯುವಕರ ಭವಿಷ್ಯಕ್ಕಾಗಿ ಮೋದಿಯವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ, ವಾಸ್ತವವೆಂದರೆ ಕಳೆದ 10 ವರ್ಷಗಳಲ್ಲಿ ಇಡೀ ದೇಶದ ಯುವಕರನ್ನು ಕತ್ತಲೆಗೆ ತಳ್ಳಲಾಗಿದೆ, ಇದಕ್ಕೆ ಸ್ವತಃ ಮೋದಿಯವರೇ ಕಾರಣ ಎಂದು ಖರ್ಗೆ ಆರೋಪಿಸಿದ್ದಾರೆ.

Click

https://newsnotout.com/2024/09/sameer-acharya-kananda-news-police-case-kannada-news/

Related posts

ಯುವರಾಜ್ ಕುಮಾರ್ ಸಲ್ಲಿಸಿದ್ದ ಡಿವೋರ್ಸ್‌ ಕೇಸ್‌ ಮುಂದೂಡಿಕೆ..! ಪತ್ನಿ ಶ್ರೀದೇವಿ ಭೈರಪ್ಪರಿಂದ ಆಕ್ಷೇಪ..! ಇಲ್ಲಿದೆ ಸಂಪೂರ್ಣ ಮಾಹಿತಿ

ದರ್ಗಾದ ಮುಂದೆ ಗಣೇಶ ಮೆರವಣಿಗೆ ನಡೆಸಿದ್ದಕ್ಕೆ ಹಿಂಸಾಚಾರ..! 144 ಸೆಕ್ಷನ್‌ ಜಾರಿ, ಶಾಲಾ, ಕಾಲೇಜುಗಳಿಗೆ ರಜೆ..! ಆ ರಾತ್ರಿ ಅಲ್ಲಿ ನಡೆದದ್ದೇನು..?

ಮಡಿಕೇರಿ: ಸಿದ್ದು, ಡಿಕೆಶಿಯನ್ನ ಪೊಲೀಸ್‌ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಳ್ಳಿ ಎಂದದ್ದೇಕೆ ಪ್ರತಾಪ್‌ ಸಿಂಹ? 21 ಆರೋಪಿಗಳನ್ನು ಬಂಧಿಸಿದ್ದೇಕೆ ಪೊಲೀಸರು?