ದೇಶ-ಪ್ರಪಂಚವೈರಲ್ ನ್ಯೂಸ್

ಮಾಲ್ಡೀವ್ಸ್‌ ನ ಬಳಿಯಲ್ಲೇ ನೌಕಾನೆಲೆ ನಿರ್ಮಿಸಿದ ಭಾರತ..! ದ್ವೀಪರಾಷ್ಟ್ರಕ್ಕೆ ಸವಾಲಾಗುತ್ತಿರುವ ಲಕ್ಷದ್ವೀಪ

ನ್ಯೂಸ್ ನಾಟೌಟ್: ಮಾಲ್ಡೀವ್ಸ್ ಮತ್ತು ಭಾರತದ ಲಕ್ಷದ್ವೀಪಗಳ ಪ್ರವಾಸೋಧ್ಯಮ ಮತ್ತು ರಾಜತಾಂತ್ರಿಕ ಜಟಾಪಟಿಯ ನಡುವೆ, ಮಾಲ್ಡೀವ್ಸ್‌ಗೆ ಸನಿಹದಲ್ಲೇ ನೌಕಾನೆಲೆಯೊಂದನ್ನು ಸ್ಥಾಪನೆ ಮಾಡುವ ಮೂಲಕ ದ್ವೀಪರಾಷ್ಟ್ರಕ್ಕೆ ಸಡ್ಡು ಹೊಡೆಯಲು ಭಾರತ ಮಂದಾಗಿದೆ ಎಂದು ವರದಿ ತಿಳಿಸಿದೆ.

ಲಕ್ಷದ್ವೀಪದ ದಕ್ಷಿಣ ಭಾಗದಲ್ಲಿರುವ ಕೊನೆಯ ದ್ವೀಪ ಪ್ರದೇಶ ಮಿನಿಕಾಯ್‌ನಲ್ಲಿ ‘ಐಎನ್‌ಎಸ್‌ ಜಟಾಯು’ ಹೆಸರಿನ ವಾಯುನೆಲೆ ಸ್ಥಾಪನೆ ಮಾಡುವ ಉದ್ದೇಶ ಹೊಂದಿರುವುದಾಗಿ ಭಾರತೀಯ ನೌಕಾಪಡೆ ತಿಳಿಸಿದೆ. ಮಾಲ್ಡೀವ್ಸ್‌ನಿಂದ ಉತ್ತರ ದಿಕ್ಕಿಗೆ ಉದ್ದೇಶಿತ ಸ್ಥಳ 130 ಕಿ.ಮೀ. ದೂರದಲ್ಲಿದೆ.ಜಟಾಯು ವಾಯುನೆಲೆಯಿಂದ ಅರಬ್ಬೀ ಸಮುದ್ರದಲ್ಲಿ ಭಾರತದ ಬಲ ಮತ್ತಷ್ಟು ವೃದ್ಧಿಯಾಗಲಿದೆ.

ಹಡಗು ಕಳ್ಳರು ಹಾಗೂ ಮಾದಕ ವಸ್ತು ದಂಧೆ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಪುಷ್ಟಿ ಸಿಗಲಿದೆ. ಜತೆಗೆ ಭಾರತದ ಮುಖ್ಯ ಭೂಮಿ ಹಾಗೂ ಲಕ್ಷದ್ವೀಪ ನಡುವಣ ಸಂಪರ್ಕಕ್ಕೂ ಅನುಕೂಲವಾಗಲಿದೆ. ಭಾರತ ಈಗಾಗಲೇ ಲಕ್ಷದ್ವೀಪದ ಕರವಟ್ಟಿಯಲ್ಲಿ ‘ದ್ವೀಪರಕ್ಷಕ’ ಎಂಬ ನೌಕಾ ನೆಲೆಯನ್ನು ಹೊಂದಿದೆ ಎಂದು ವರದಿ ತಿಳಿಸಿದೆ.ಕಳೆದ ವರ್ಷ ಮೊಹಮ್ಮದ್‌ ಮುಯಿಜು ಅವರು ಮಾಲ್ಡೀವ್ಸ್‌ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ಬಳಿಕ ಭಾರತ- ಮಾಲ್ಡೀವ್ಸ್‌ ನಡುವಣ ಸಂಬಂಧ ಹಳಸಿದೆ. ಚೀನಾದತ್ತ ಒಲವು ಹೊಂದಿರುವ ಮುಯಿಜು ಅಧ್ಯಕ್ಷರಾದ ಬಳಿಕ ಸಂಪ್ರದಾಯದಂತೆ ಭಾರತಕ್ಕೆ ಬರುವ ಬದಲು ಮೊದಲು ಚೀನಾಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ.

Related posts

ಜಮ್ಮು ಕಾಶ್ಮೀರದಲ್ಲಿ ನಿಗೂಢ ಕಾಯಿಲೆಗೆ 17 ಮಂದಿ ಸಾವು..! ಸಾವನ್ನಪ್ಪಿದವರ ಮನೆಗಳನ್ನು ಸಂಪೂರ್ಣವಾಗಿ ಸೀಲ್ ಮಾಡಿದ ಆರೋಗ್ಯ ಇಲಾಖೆ..!

ಪತ್ನಿಯನ್ನೇ ಕಾಲ್ ಗರ್ಲ್ ಎಂದು ಪೋಸ್ಟ್ ಮಾಡಿದ ಗಂಡ..! ಅಕ್ಕ ಮತ್ತು ತಮ್ಮನಿಗೆ ಎಡೆಬಿಡದೆ ಬರುತ್ತಿರುವ ಕರೆಗಳು..!

ಅಬ್ದುಲ್ ಕಲಾಂ ರಾಷ್ಟ್ರೀಯ ಸ್ಮಾರಕದ ಗೋಡೆಗೆ ಡಿಕ್ಕಿ ಹೊಡೆದು ಆಟೋರಿಕ್ಷಾ ಪಲ್ಟಿ..! ಇಲ್ಲಿದೆ ವೈರಲ್ ವಿಡಿಯೋ