ನ್ಯೂಸ್ ನಾಟೌಟ್: ಭಾರತ ಸೇನೆಯ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಬಗ್ಗೆ ಇಡೀ ದೇಶವೇ ಕೊಂಡಾಡಿದ್ರೆ ಇತ್ತ ಮಲಯಾಳಂ ನಟಿ ಅಮೀನಾ ಭಾರತದ ವಿರುದ್ಧವೇ ಮಾತನಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನನಗೆ ನಾಚಿಕೆಯಾಗ್ತಿದೆ, ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಕೊಲ್ಲುವುದೇ ಪರಿಹಾರವಲ್ಲ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಇದಕ್ಕೆ ಜನ ಕಾಮೆಂಟ್ ಮಾಡುತ್ತಾ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ನಟಿ ಹೇಳಿದ್ದೇನು?
ದೇಶದ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ. ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಕೊಲ್ಲುವುದನ್ನು ಪರಿಹಾರವಾಗಿ ಹುಡುಕಿರುವುದಕ್ಕೆ ನಾಚಿಕೆಯಾಗ್ತಿದೆ. ಆದರೆ ಇನ್ನೂ ಹಲವು ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿದೆ. ಕೊಲ್ಲುವುದರಿಂದ ಯುದ್ಧವು ಶಾಂತಿಯನ್ನು ತರುವುದಿಲ್ಲ. ಇದನ್ನು ನಾನು ಬೆಂಬಲಿಸುವುದಿಲ್ಲ. ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಂಡಿದ್ದೇವೆ ಎಂದು ಯೋಚಿಸುವ ಯೋಚನೆಯೂ ತಪ್ಪಾಗಿದೆ. ಈ ಯುದ್ಧದಿಂದ ನಷ್ಟವಾಗುತ್ತಿರೋದು ಜನರಿಗೆ ಮಾತ್ರ. ನಾನು ನನ್ ಜನರ ಒಳಿತಿಗಾಗಿ ಮಾತನಾಡುವ ಭಾರತೀಯಳು, ಅಹಂಕಾರಕ್ಕೆ ಪೆಟ್ಟು ಬಿದ್ದಾಗ ಮಾತ್ರ ಮಾತನಾಡುವವಳಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ‘ಟರ್ಬೋ’ ನಟಿ ಅಮೀನಾ ಬರೆದುಕೊಂಡಿದ್ದಾರೆ.
ಆದರೆ ಈ ಬರಹವನ್ನು ನೋಡಿದ ನೆಟ್ಟಿಗರು ನಟಿ ವಿರುದ್ಧ ಕೆಂಡಾಮಂಡಲರಾಗಿದ್ದು, ಭಾರತದಲ್ಲಿದ್ದು ಭಾರತೀಯಳಾಗಿ ತನ್ನ ದೇಶದ ವಿರುದ್ಧವೇ ಮಾತನಾಡುತ್ತಿರುವ ಅಮೀನಾಗೆ ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಟಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಗೃಹ ಸಚಿವ ಅಮಿತ್ ಶಾ ಅವರಿಗೆ ಅನೇಕರು ಮನವಿಯನ್ನೂ ಮಾಡಿದ್ದಾರೆ.