ಕರಾವಳಿ

ದುರಂತ ಅಂತ್ಯವಾಗುವ ಕೆಲವೇ ಗಂಟೆಗಳ ಮೊದಲು ಇನ್ಸ್ಟಾದಲ್ಲಿ ವಿಡಿಯೋ ಹಂಚಿಕೊಂಡಿದ್ದ ನಟಿ ಅಪರ್ಣಾ ನಾಯರ್..!,ಕೊನೆಯ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದೇನು?

227

ನ್ಯೂಸ್ ನಾಟೌಟ್ :ಮಲಯಾಳಂ ಕಿರುತೆರೆ ಮತ್ತು ಹಿರಿತೆರೆ ನಟಿ ಅಪರ್ಣಾ ನಾಯರ್ ಅವರು ತಮ್ಮ 31ನೇ ವಯಸ್ಸಿಗೆ ದುರಂತ ಅಂತ್ಯ ಕಂಡಿದ್ದಾರೆ. ಪೊಲೀಸರ ಪ್ರಕಾರ,ಅಪರ್ಣಾ ಅವರು ತಿರುವನಂತಪುರಂನಲ್ಲಿರುವ ತಮ್ಮ ನಿವಾಸದಲ್ಲಿ ನೇ* ಣು ಬಿಗಿದು ಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಪತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದ ಇವರು ಕೇವಲ 31 ವರ್ಷದ ಉದಯೋನ್ಮಖ ನಟಿ.ಈ ನಟಿ ಇಲ್ಲ ಅನ್ನುವ ನೋವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.ದುರಂತ ಅಂತ್ಯದ ಹಿಂದೆ ಹಲವು ಅನುಮಾನಗಳು ಕೂಡ ವ್ಯಕ್ತವಾಗಿವೆ.ಇದಕ್ಕು ಮುನ್ನ ಕೆಲವೇ ಗಂಟೆಗಳ ಮೊದಲು,ಅವರು ತಮ್ಮ ಕೊನೆಯ Instagram ಪೋಸ್ಟ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು,ಮಗಳ ಮೇಲಿನ ಪ್ರತಿಯ ಬಗ್ಗೆ ಹೇಳಿಕೊಂಡಿದ್ದಾರೆ.

ತನ್ನ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ, ಅಪರ್ಣಾ ತನ್ನ ಪತಿ ಸಂಜಿತ್‌ನನ್ನು ‘ನನ್ನ ಶಕ್ತಿ’ ಎಂದು ಕರೆದಿದ್ದರು.ಹೀಗೆ ಅಪರ್ಣಾ ನಾಯರ್ ಅವರ ಇನ್‌ಸ್ಟಾಗ್ರಾಮ್ ಪೂರ್ತಿ ಅವರ ಪತಿ ಮತ್ತು ಮಕ್ಕಳ ಸಂತೋಷದ ಫೋಟೋಗಳು ಮತ್ತು ವಿಡಿಯೋಗಳಿಂದ ತುಂಬಿದೆ.ಇದನ್ನು ಕಂಡಾಗ ಅವರು ಫ್ಯಾಮಿಲಿ ಜತೆ ಎಷ್ಟೊಂದು ಹ್ಯಾಪಿಯಾಗಿದ್ದರು ಅನ್ನೋದು ತಿಳಿದು ಬರುತ್ತೆ.

https://www.instagram.com/reel/CwmbXdtJDcg/?utm_source=ig_web_copy_link&igshid=MzRlODBiNWFlZA==

ವಿಡಿಯೋದಲ್ಲಿ ತಮ್ಮ ಕಿರಿಯ ಮಗಳ ಫೋಟೋಗಳಿದ್ದು, ಇದರ ಜೊತೆಗೆ ಹಿತವಾದ ಲಾಲಿ ಹಾಡಿದ್ದಾರೆ. ‘ನನ್ನ ಉನ್ನಿ, ಕೀಟಲೆಯ ಪುಟ್ಟ ಮಗು’ ಎಂಬ ಶೀರ್ಷಿಕೆಯನ್ನು ಅವರು ಸೇರಿಸಿದ್ದಾರೆ. ಈ ಕೊನೆಯ ಪೋಸ್ಟ್ ತನ್ನ ಮಗುವಿನ ಮೇಲೆ ಆಕೆಗಿದ್ದ ಪ್ರೀತಿಗೆ ಸಾಕ್ಷಿಯಾಗಿದೆ ಉಳಿದುಕೊಂಡಿದೆ.

ಅಪರ್ಣಾ ನಾಯರ್ ಅವರು ದೂರದರ್ಶನ ಮತ್ತು ಬೆಳ್ಳಿ ಪರದೆಯಲ್ಲಿ ಕೆಲಸ ಮಾಡಿದ್ದಾರೆ. ಚಂದನಮಜ, ಆತ್ಮಸಖಿ, ಮೈಥಿಲಿ ವೀಂದುಂ ವರುಮ್ ಮತ್ತು ದೇವಸ್ಪರ್ಶಂನಂತಹ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘತೀರ್ಥಂ, ಮುತ್ತುಗೌ, ಅಚಾಯನ್ಸ್, ಕೊಡತಿ ಸಮಕ್ಷಂ ಬಾಲನ್ ವಕೀಲ್, ಮತ್ತು ಕಲ್ಕಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಪರ್ಣಾ ನಟಿಸಿದ್ದಾರೆ.

See also  ಪರಸ್ಪರ ಅಪ್ಪಿಕೊಂಡ ಸ್ಥಿತಿಯಲ್ಲಿ ಶವಗಳು ಪತ್ತೆ..! ಆ ಗ್ರಾಮದ 400 ಮನೆಗಳಲ್ಲಿ ಉಳಿದದ್ದು ಕೇವಲ 30 ಮನೆಗಳು..! ಇಲ್ಲಿದೆ ಕೆಲ ವಿಡಿಯೋಗಳು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget