Latestಕ್ರೈಂವೈರಲ್ ನ್ಯೂಸ್ಸಿನಿಮಾ

ಮಲಯಾಳಂ ಸ್ಟಾರ್ ನಟ ಉನ್ನಿ ಮುಕುಂದನ್ ವಿರುದ್ಧ ದೂರು ದಾಖಲು..! ಆಸ್ಪತ್ರೆಗೆ ದಾಖಲಾದ ನಟನ ಮ್ಯಾನೇಜರ್..!

393

ನ್ಯೂಸ್ ನಾಟೌಟ್ : ಕೆಲ ತಿಂಗಳ ಹಿಂದಷ್ಟೆ ಬಿಡುಗಡೆ ಆದ ಮಲಯಾಳಂನ ಸೂಪರ್ ಹಿಟ್ ಸಿನಿಮಾ ‘ಮಾರ್ಕೊ’ದ ನಾಯಕ ಉನ್ನಿ ಮುಕುಂದನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಉನ್ನಿ ಮುಕುಂದನ್ ವಿರುದ್ಧ ಮ್ಯಾನೇಜರ್ ರೇ ದೂರು ನೀಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟ ಉನ್ನಿ ಮುಕುಂದನ್ ನನ್ನ ಮೇಲೆ ಹೇರಲಾಗಿರುವ ಆರೋಪಗಳೆಲ್ಲ ಸುಳ್ಳು ಎಂದಿದ್ದಾರೆ.

ನಟ ಉನ್ನಿ ಮುಕುಂದನ್ ಬಳಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವಿಪಿನ್ ಎಂಬವರು ಕೇರಳದ ಕೊಚ್ಚಿಯಲ್ಲಿ ಉನ್ನಿ ಮುಕುಂದನ್ ವಿರುದ್ಧ ದೂರು ನೀಡಿದ್ದಾರೆ. ಉನ್ನಿ ಮುಕುಂದನ್ ತಮ್ಮ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವುದು ಮಾತ್ರವೇ ಅಲ್ಲದೆ ಅಶ್ಲೀಲ ಪದಗಳನ್ನು ಬಳಸಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ವಿಪಿನ್, ಕೊಚ್ಚಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಘಟನೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ನಟ ಉನ್ನಿ ಮುಕುಂದನ್, ‘ನನ್ನ ಮೇಲೆ ವಿಪಿನ್ ಮಾಡಿರುವ ಎಲ್ಲ ಆರೋಪಗಳು ಸುಳ್ಳು. ನಾನು ಹಾಗೂ ವಿಪಿನ್ ಭೇಟಿ ಮಾಡಿದ ಸಂದರ್ಭದ ಸಿಸಿಟಿವಿ ದೃಶ್ಯಾವಳಿ ಸಾಕ್ಷಿಯಾಗಿದೆ. ಅಲ್ಲದೆ ವಿಪಿನ್ ನನ್ನ ಖಾಸಗಿ ಮ್ಯಾನೇಜರ್ ಆಗಿಯೇ ಇರಲಿಲ್ಲ’ ಎಂದಿದ್ದಾರೆ ಉನ್ನಿ ಮುಕುಂದನ್ ಹೇಳಿದ್ದಾರೆ.

ತಮ್ಮ ಹಾಗೂ ವಿಪಿನ್ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವೇನು ಎಂದು ವಿವರಿಸಿರುವ ಉನ್ನಿ ಮುಕುಂದನ್, ‘ಮಲಯಾಳಂನ ಕೆಲವು ನಟಿಯರನ್ನು ಭೇಟಿ ಆಗುತ್ತಿದ್ದ ವಿಪಿನ್, ಮುಕುಂದನ್ ಅನ್ನು ಮದುವೆ ಆಗುವಂತೆ ನಟಿಯರನ್ನು ಕೇಳುತ್ತಿದ್ದ, ಇದೇ ಕಾರಣಕ್ಕೆ ನನ್ನ ಹಾಗೂ ವಿಪಿನ್ ನಡುವೆ ಭಿನ್ನಾಭಿಪ್ರಾಯ ಮೂಡಿತು. 2018 ರಲ್ಲಿ ಆ ವ್ಯಕ್ತಿ ತಮ್ಮ ಬ್ಯಾನರ್ ​ನಲ್ಲಿ ಸಿನಿಮಾ ನಿರ್ಮಾಣ ಮಾಡುವುದಾಗಿ ನನ್ನ ಪರಿಚಯ ಬೆಳೆಸಿಕೊಂಡ. ತಾನು ಮಲಯಾಳಂ ಚಿತ್ರರಂಗದ ಜನಪ್ರಿಯ ಸ್ಟಾರ್ ನಟರ ಪಿಆರ್ ಹ್ಯಾಂಡಲ್ ಮಾಡುವುದಾಗಿ ಹೇಳಿಕೊಂಡಿದ್ದ’ ಎಂದಿದ್ದಾರೆ ಮುಕುಂದನ್. 

ಮಂಗಳೂರು: ರಹೀಂ ಶವ ಮೆರವಣಿಗೆ ವೇಳೆ ಬಲವಂತವಾಗಿ ಬಂದ್‌ ಮಾಡಿಸಿದ ಕಿಡಿಗೇಡಿಗಳು..! ಸಿಟಿ ಬಸ್ ಮೇಲೆ ಕಲ್ಲು ತೂರಾಟ..!

ಹನಿಮೂನ್ ​ಗೆಂದು ತೆರಳಿದ್ದ ದಂಪತಿ ನಿಗೂಢವಾಗಿ ನಾಪತ್ತೆ..! ಕಾಡಿನಲ್ಲಿ ಬಾಡಿಗೆಗೆ ಪಡೆದಿದ್ದ ಸ್ಕೂಟರ್ ಪತ್ತೆ..!

See also  ಪಂಜ: 'ನ್ಯೂಸ್ ನಾಟೌಟ್' ಸತತ ವರದಿಗೆ ಸಿಕ್ಕ ಜಯ, ಪುಟ್ಟ ಬಾಲಕನ ಬಡ ಕುಟುಂಬದ ಕೈಗೆ ಶೀಘ್ರವೇ ಸೇರಲಿದೆ ಆಧಾರ್ , ವೋಟರ್ ಐಡಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget