ಕ್ರೀಡೆ/ಸಿನಿಮಾವೈರಲ್ ನ್ಯೂಸ್ಸಿನಿಮಾ

ಮಧ್ಯರಾತ್ರಿ ಮಾಜಿ ಪತಿಯ ಮನೆಗೆ ಬಂದದ್ದೇಕೆ ಮಲೈಕಾ..! ಏನಿದು ಘಟನೆ..?

235

ನ್ಯೂಸ್ ನಾಟೌಟ್: ಬಾಲಿವುಡ್ ನಟಿ, ರೂಪದರ್ಶಿ ಮಲೈಕಾ ಅರೋರಾ 2017 ರಲ್ಲಿ ತಮ್ಮ ಪತಿ ಮತ್ತು ನಟ ಅರ್ಬಾಜ್ ಖಾನ್ ಅವರಿಂದ ಬೇರ್ಪಟ್ಟರು. ಮದುವೆಯಾಗಿ ವರ್ಷಗಳೇ ಕಳೆದರೂ ಏಕಾಏಕಿ ವಿಚ್ಛೇದನ ಘೋಷಿಸಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ವಿಚ್ಛೇದನದ ನಂತರವೂ ಮಲೈಕಾ ಮತ್ತು ಅರ್ಬಾಜ್ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗಿತ್ತು. ವಿಶೇಷವಾಗಿ ಅವರು ತಮ್ಮ 21 ವರ್ಷದ ಮಗ ಅರ್ಹಾನ್ ಖಾನ್‌ಗೆ ಯಾವಾಗಲೂ ಸಪೋರ್ಟಿವ್ ಆಗಿರುತ್ತಾರೆ ಎನ್ನಲಾಗಿತ್ತು.

ಈಗ ಮಲೈಕಾ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಅವರು ಅರ್ಬಾಜ್ ಖಾನ್ ಅವರ ಮನೆಯ ಹೊರಗೆ ಕಾಣಿಸಿಕೊಂಡಿದ್ದಾರೆ. ಶನಿವಾರ(ಎ.27) ರಾತ್ರಿ ಮಾಜಿ ಪತಿ ಅರ್ಬಾಜ್ ಖಾನ್ ಅವರ ಮನೆಯ ಹೊರಗೆ ಮಲೈಕಾ ಅರೋರಾ ಕಾಣಿಸಿಕೊಂಡಿದ್ದಾರೆ. ಮಲೈಕಾ ಅವರ ಈ ವೀಡಿಯೊವನ್ನು ಇನ್‌ಸ್ಟಂಟ್ ಬಾಲಿವುಡ್ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ಸಮಯದಲ್ಲಿ, ಅವರ 21 ವರ್ಷದ ಮಗ ಅರ್ಹಾನ್ ಖಾನ್ ಕೂಡ ಮಲೈಕಾ ಜೊತೆ ಕಾಣಿಸಿಕೊಂಡರು. ಮಲೈಕಾ ತನ್ನ ಮಾಜಿ ಗಂಡನ ಮನೆಗೆ ಬಂದಾಗ ತುಂಬಾ ಸ್ಟೈಲಿಶ್ ಆಗಿ ಕಾಣುತ್ತಿದ್ದರು. ಅವರು ಬಿಳಿ ಶರ್ಟ್ ಮತ್ತು ಶಾರ್ಟ್ಸ್ ಧರಿಸಿದ್ದರು. ಹಸಿರು ಬಣ್ಣದ ಹೀಲ್ಸ್, ಹಸಿರು ಬ್ಯಾಗ್ ಮತ್ತು ಸನ್ ಗ್ಲಾಸ್​ ಜೊತೆ ನಟಿ ಮಸ್ತ್ ಆಗಿ ಕಾಣಿಸಿದ್ದರು. ಇದರೊಂದಿಗೆ ಮೆಸ್ಸಿ ಬನ್ ಮಾಡಿದ್ದರು. ಮತ್ತೊಂದೆಡೆ, ಅರ್ಹಾನ್ ತನ್ನ ತಾಯಿಯೊಂದಿಗೆ ಮ್ಯಾಚಿಂಗ್ ಔಟ್​ಫಿಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಕೆಲವರು ಇಷ್ಟು ಲೇಟಾಗಿ ಮಾಜಿ ಗಂಡನ ಮನೆಗೆ ಬಂದಿದ್ದೇಕೆ ಎಂದಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

See also  ದೀಪಾವಳಿ: ಈ ಸ್ವೀಟ್‌ ಗೆ ಬರೋಬ್ಬರಿ 21000 ರೂ.? ಆ ಸ್ವೀಟ್ ಯಾವುದು? ಚಿನ್ನದ ಬೆಲೆಯ ಸ್ವೀಟ್ ನ ವಿಶೇಷತೆಗಳೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget