ಕ್ರೈಂ

ಹೆತ್ತ ತಾಯಿಯನ್ನೇ ಕತ್ತು ಸೀಳಿ ಭೀಕರವಾಗಿ ಕೊಂದ ಪಾಪಿ ಮಗ..! ಅಷ್ಟಕ್ಕೂ ಆತನಿಗೇಕೆ ಆಕೆಯ ಮೇಲೆ ದ್ವೇಷ..?

ನ್ಯೂಸ್‌ ನಾಟೌಟ್‌: ಕೋಪದ ಕೈಗೆ ಬುದ್ದಿ ಕೊಟ್ಟರೆ ನಡೆಯಬಾರದ ಅನಾಹುತಗಳು ನಡೆದುಹೋಗುತ್ತವೆ. ಇದಕ್ಕೊಂದು ನಿದರ್ಶನವೆಂಬಂತೆ ಖತರ್ನಾಕ್‌ ಪುತ್ರನೋರ್ವ ಕ್ಷುಲ್ಲಕ ಕಾರಣಕ್ಕೆ ಹೆತ್ತ ತಾಯಿಯನ್ನೇ ಚಾಕುವಿನಿಂದ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ್ದಾನೆ.

ಬೆಂಗಳೂರು ಗ್ರಾಮಾಂತರದ ದೊಡ್ಡ ಬಳ್ಳಾಪುರ ಹೊರ ವಲಯದ ರಾಗರಾಳ್ಳಗುಟ್ಟೆ ಬಳಿ ಈ ಘಟನೆ ನಡೆದಿದೆ. ಕೊಲೆಯಾದ ಮಹಿಳೆಯನ್ನು ರತ್ನಮ್ಮ (56) ಎಂದು ಗುರುತಿಸಲಾಗಿದೆ. ಕೃತ್ಯವೆಸಗಿದ ಆರೋಪಿ ಪುತ್ರ ಗಂಗರಾಜು ಪರಾರಿಯಾಗಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ತಾಯಿ-ಮಗನ ನಡುವೆ ಜಗಳ ಆರಂಭವಾಗಿ ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯೊಂದಿಗೆ ಅಂತ್ಯಗೊಂಡಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಹೊರವಲಯದ ರಾಗರಾಳ್ಳಗುಟ್ಟೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ರೆಸ್ಟೋರೆಂಟ್‌ನಲ್ಲಿ ಡ್ರೈ ಐಸ್ ತಿಂದು ರಕ್ತ ಕಕ್ಕಿದ ಗ್ರಾಹಕರು..! ಹೊಟೆಲ್ ಮಾಲೀಕ ಪರಾರಿ, ಮ್ಯಾನೇಜರ್ ಅರೆಸ್ಟ್..!

ಸುಳ್ಯ: ಶಂಕಿತ ಡೆಂಗ್ಯೂಗೆ ಅತಿಥಿ ಶಿಕ್ಷಕಿ ಬಲಿ, ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಬದುಕಲಿಲ್ಲ ಜೀವ..!

ಪೈಚಾರ್: ಬೈಕ್ ಗಳ ಮಧ್ಯೆ ಮುಖಾಮುಖಿ ಡಿಕ್ಕಿ..! ಸವಾರರಿಗೆ ಗಾಯ