ನ್ಯೂಸ್ ನಾಟೌಟ್: ಹಿಂದೂ ಪರ ಹೋರಾಟಗಾರ ಸೌಜನ್ಯ ನ್ಯಾಯದ ಪರ ಸಿಂಹ ಘರ್ಜನೆ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಯವರ ಮಾತೃಶ್ರೀ ಯವರು ನಿಧನರಾಗಿದ್ದಾರೆ. ಅಮಣಿ ಶೆಟ್ಟಿ (85 ವರ್ಷ) ಅವರು ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದರು.
ತೊಕ್ಕೊಟ್ಟುವಿನಲ್ಲಿ ಸೌಜನ್ಯ ಪರ ನ್ಯಾಯದ ಹೋರಾಟದ ವೇದಿಕೆಯಲ್ಲಿದ್ದಾಗಲೇ ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ತಾಯಿ ನಿಧನರಾದ ಸುದ್ದಿ ತಿಳಿದು ಬಂತು. ಈ ವಿಷಯ ಗೊತ್ತಾಗಿ ಅತೀವ ನೋವಿನಲ್ಲಿದ್ದರೂ ಇಡೀ ಕಾರ್ಯಕ್ರಮವನ್ನು ಮುಗಿಸಿಯೇ ಮಹೇಶ್ ಶೆಟ್ಟಿ ತಿಮರೋಡಿಯವರು ವೇದಿಕೆಯಿಂದ ನಿರ್ಗಮಿಸಿದರು.