ನ್ಯೂಸ್ ನಾಟೌಟ್ : ಆಗ್ರಾದಲ್ಲಿರುವ ತಾಜ್ ಮಹಲ್ ನಲ್ಲಿ ಮಹಿಳೆಯೊಬ್ಬರು ಶಿವಲಿಂಗವನ್ನು ಇರಿಸಿ ಅದಕ್ಕೆ ಅಭಿಷೇಕ ಮಾಡಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಮೀರಾ ರಾಥೋಡ್ ತಾಜ್ ಮಹಲ್ ಮುಂದೆ ನಿಂತು ವಿಡಿಯೋ ಮಾಡುತ್ತಿರುವುದು ಒಂದು ವಿಡಿಯೋದಲ್ಲಿ ಕಾಣಬಹುದು ಇದರ ಮುಂದಿನ ವಿಡಿಯೋ ದಲ್ಲಿ ತಾಜ್ ಮಹಲ್ ಎನ್ನಲಾದ ಕಟ್ಟಡದ ಒಳಭಾಗದಲ್ಲಿ ಸಣ್ಣ ಶಿವಲಿಂಗವನ್ನು ಇರಿಸಿ ಅದಕ್ಕೆ ಮಹಾಕುಂಭದಿಂದ ತರಿಸಲಾಗಿದೆ ಎನ್ನಲಾದ ಗಂಗಾ ಜಾಲವನ್ನು ಅಭಿಷೇಕ ಮಾಡಿ ಬಳಿಕ ಪೂಜೆ ಮಾಡುವ ವಿಡಿಯೋ ಕಾಣುತ್ತದೆ.
महाशिवरात्रि पर ताजमहल में भगवान शिव का अभिषेक… महिला साथ लेकर गईं शिवलिंग, संगम से लाया गंगाजल चढ़ाया pic.twitter.com/G1SH21SGEk
— Abhishek Saxena (@abhis303) February 26, 2025
ವಿಡಿಯೋದಲ್ಲಿ ಮಹಿಳೆ ನೀಡಿದ ಹೇಳಿಕೆಯಲ್ಲಿ ತಾಜ್ ಮಹಲ್ ಶುದ್ದೀಕರಣ ಮಾಡುವ ನಿಟ್ಟಿನಲ್ಲಿ ಶಿವರಾತ್ರಿಯ ದಿನದಂದು ಶಿವಲಿಂಗವನ್ನು ತಂದು ಅದಕ್ಕೆ ಅಭಿಷೇಕ ಮಾಡಲಾಯಿತು ಎಂದು ಹೇಳಿದ್ದಾರೆ.
ಸದ್ಯ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಿವಾದಕ್ಕೆ ಕಾರಣವಾಗಿದೆ.