ಕರಾವಳಿಪುತ್ತೂರು

ಪುತ್ತೂರು: ಅಡಿಕೆ, ಕರಿಮೆಣಸನ್ನು ಬಿಜೆಪಿ ಸರಕಾರವೇ ಕೈ ಬಿಟ್ಟಿದ್ದು, ಕಮಲ ಪಾಳಯದ ವಿರುದ್ಧ ಗುಡುಗಿದ ಮಹಮ್ಮದ್ ಅಲಿ

ನ್ಯೂಸ್ ನಾಟೌಟ್: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಿಂದ ಅಡಿಕೆ ಹಾಗೂ ಕರಿಮೆಣಸನ್ನು ಬಿಜೆಪಿ ಸರಕಾರವೇ ಕೈ ಬಿಟ್ಟಿದ್ದು ಎಂದು ಕಾಂಗ್ರೆಸ್ ಮುಖಂಡ ಮಹಮ್ಮದ್ ಅಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಪ್ರತಿನಿಧಿಸುವ ಬಿಜೆಪಿ ಸರಕಾರವೇ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಿಂದ ಅಡಿಕೆ ಮತ್ತು ಕರಿಮೆಣಸನ್ನು ಕೈ ಬಿಟ್ಟಿದ್ದಾರೆ. ಕೇಂದ್ರ ಸರಕಾರ ವಾಣಿಜ್ಯ ಬೆಳೆಗಳಿಗಾಗಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಜಾರಿಗೊಳಿಸಿದೆ. ಪ್ರಸಕ್ತ ಸಾಲಿನಲ್ಲಿ ಹವಾಮಾನ ಆಧಾರಿತ ವಿಮಾ ಯೋಜನೆಯನ್ನು ಕೈಬಿಡಲಾಗಿದೆ.

ಈ ಯೋಜನೆಯನ್ನು ಕೈ ಬಿಡಲು ಬಿಜೆಪಿ ಸರಕಾರವೇ ನೇರ ಕಾರಣವಾಗಿದೆ. ದಿನಾಂಕ 06/02/2024 ರಂದು ನಡೆದ ರಾಜ್ಯ ಮಟ್ಟದ ಬೆಳೆ ವಿಮಾ ಸಮನ್ವಯ ಸಮಿತಿ ಸಭೆಯಲ್ಲಿರಾಜ್ಯದಲ್ಲಿ ಕೇಂದ್ರ ಸರಕಾರದ ಪರಿಷೃತ ಮಾರ್ಗಸೂಚಿಯನ್ವಯ ಪ್ರಧಾನಮಂತ್ರಿ ಫಸಲ್ ಯೋಜನೆಯನ್ನು ಮಾತ್ರ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ. ಆದರೆ ಈ ಸಭೆಯಲ್ಲಿ ಹವಾಮಾನ ಆಧಾರಿತ ವಿಮಾ ಯೋಜನೆಗೆ ಅನುಮೋದನೆ ನೀಡದೆ ಕೈ ಬಿಟ್ಟಿರುತ್ತಾರೆ. 06/02/2023 ರಂದು ನಡೆದ ಈ ಸಭೆಯ ಸಮಯದಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರದ ಆಡಳಿತವಿತ್ತು. ಮತ್ತು ಆ ಸಮಯದಲ್ಲಿ ಸಂಜೀವ ಮಠಂದೂರು ಶಾಸಕರಾಗಿಯೂ ಇದ್ದರು ಎಂದು ಮಾಹಿತಿ ನೀಡಿದರು.

Related posts

ಸುಳ್ಯದಲ್ಲಿ ಮತ್ತೆ ಕಳ್ಳರ ‘ಕೈ ಚಳಕ’, ಎರಡು ಅಂಗಡಿಗಳ ಬೀಗ ಮುರಿದವರು ದೋಚಿದೆಷ್ಟು..?

ಮರಕ್ಕೆ ಹತ್ತಿ ರಾಮಪತ್ರೆ ಕೊಯ್ಯುತ್ತಿದ್ದಾಗ ಜಾರಿ ಬಿದ್ದ ವ್ಯಕ್ತಿ,ಆಸ್ಪತ್ರೆ ತಲುಪುವ ಮುನ್ನವೇ ನಿಧನ

ಸುಳ್ಯ:ರಾಷ್ಟ್ರ ಮಟ್ಟದ ಡಿಬೇಟ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು..!ಕೆ.ವಿ.ಜಿ. ಕಾನೂನು ಮಹಾ ವಿದ್ಯಾಲಯ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಸಾಧನೆ..!