ಕ್ರೈಂದೇಶ-ವಿದೇಶಬೆಂಗಳೂರುವೈರಲ್ ನ್ಯೂಸ್

ಮಹಿಳೆಯ ಭೀಕರ ಕೊಲೆ ಮಾಡಿ ತುಂಡುಗಳನ್ನು ಫ್ರಿಡ್ಜ್ ನಲ್ಲಿಟ್ಟಿದ್ದ ಆರೋಪಿ ಆತ್ಮಹತ್ಯೆ..! ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ..!

220

ನ್ಯೂಸ್ ನಾಟೌಟ್ : ಹತ್ಯೆ ಮಾಡಿ ಫ್ರಿಜರ್ ನಲ್ಲಿ ದೇಹವನ್ನು ತುಂಡು ಮಾಡಿ ಇರಿಸಿದ್ದ ಪ್ರಕರಣದ ತನಿಖೆಯ ವೇಳೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಮಹಾಲಕ್ಷ್ಮೀ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ನೇಪಾಳ ಮೂಲದ ಮಹಾಲಕ್ಷ್ಮಿಯನ್ನು ಹತ್ಯೆಗೈದು ದೇಹದ ಭಾಗಗಳನ್ನು ತುಂಡರಿಸಿ ಫ್ರಿಡ್ಜ್​ನಲ್ಲಿಟ್ಟು ಪ್ರಕರಣಕ್ಕೆ ಸಂಬಂಧಿಸಿದ ಶಂಕಿತ ಆರೋಪಿ ಮುಕ್ತಿ ರಂಜನ್ ಎಂಬಾತ​ ಒಡಿಶಾದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಈತ ಮಹಾಲಕ್ಷ್ಮಿ ಕೊಲೆ ಬಳಿಕ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈ ಸಂಬಂಧ ವಿಚಾರಣೆಗೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸರು ಒಡಿಶಾಗೆ ತೆರಳಲು ಮುಂದಾಗಿದ್ದರು.

ಸೆಪ್ಟೆಂಬರ್ 1ರ ತನಕ ಮಹಾಲಕ್ಷ್ಮಿ ಕೆಲಸಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2 ಅಥವಾ 3 ರಂದು ಆಕೆಯ ಕೊಲೆ ಆಗಿರಬಹುದು ಎಂದು ಪೊಲೀಸರು ಸದ್ಯಕ್ಕೆ ಅಂದಾಜಿಸಿದ್ದಾರೆ. ಇನ್ನೂ ಆಕೆ ಕೆಲಸ ಮಾಡುತ್ತಿದ್ದ ಶಾಪ್‌ನ ಟೀಂ ಲೀಡರ್ ಮುಕ್ತಿರಂಜನ್ ಕೂಡ ಸೆಪ್ಟೆಂಬರ್ 1ರ ನಂತರ ಕೆಲಸಕ್ಕೆ ಬಾರದೇ ಇರೋದು ಹಲವು ಅನುಮಾಗಳಿಗೆ ಕಾರಣವಾಗಿತ್ತು. ಒಡಿಶಾದಲ್ಲಿ ಹಂತಕ ಇರುವ ಶಂಕೆ ಮೇರೆಗೆ ಪೊಲೀಸರು ಅಲ್ಲಿಗೆ ತೆರಳಿದ್ದರು. ಆದರೆ, ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

Click

https://newsnotout.com/2024/09/haleneranky-ambulance-collison-at-mangaluru-kannada-news/
https://newsnotout.com/2024/09/donkey-sold-to-farmers-and-issued-company-cid-investigation-kannada-news/
https://newsnotout.com/2024/09/live-missile-attack-kannada-news-viral-video-isrel-and-conflict/
https://newsnotout.com/2024/09/swami-narayan-mandhir-america-anti-hindu-writing-kannada-news/
https://newsnotout.com/2024/09/madikeri-virajpete-resident-teacher-nomore-kannada-news/
See also  ಮಡಿಕೇರಿ: ಮಿತಿಮೀರಿದ ಕಾಡಾನೆ ಹಾವಳಿ, ಭಯದ ನೆರಳಲ್ಲಿ ಶಾಲಾ ಮಕ್ಕಳು, ಪೋಷಕರು..! ಶಾಲಾ ಮಕ್ಕಳನ್ನು ತಮ್ಮ ವಾಹನದಲ್ಲೇ ಮನೆಮನೆಗೆ ತಲುಪಿಸಿದ ಅರಣ್ಯ ಇಲಾಖೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget