Latestದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಮಹಾಕುಂಭಮೇಳಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪುಣ್ಯಸ್ನಾನ..! ಇಲ್ಲಿದೆ ವಿಡಿಯೋ

542

ನ್ಯೂಸ್ ನಾಟೌಟ್ : 144 ವರ್ಷಗಳ ಬಳಿಕ ಪ್ರಯಾಗ್‌ ರಾಜ್‌ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ತೆರಳಿ, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.

ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾ ಕುಂಭಮೇಳದಲ್ಲಿ ಒಳ್ಳೆಯ ವ್ಯವಸ್ಥೆ ಮಾಡಲಾಗಿದೆ. ಅದ್ಭುತ ವ್ಯವಸ್ಥೆ ಮಾಡಿದ್ದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಧನ್ಯವಾದ ಹೇಳುತ್ತೇನೆ. 2019ರಲ್ಲಿ ನಡೆದ ಕುಂಭ ಮೇಳದಲ್ಲಿ ಜನರು ಸಂಕಷ್ಟ ಅನುಭವಿಸಿದ್ದು ನನಗೆ ನೆನಪಿದೆ. ಈ ಬಾರಿ ಅನೇಕ ಗಣ್ಯರು ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ. ಅಂಬಾನಿ, ಅದಾನಿ ಕುಟುಂಬದವರು ಹಾಗೂ ಅನೇಕ ದೊಡ್ಡ ದೊಡ್ಡ ನಟರು ಭೇಟಿ ನೀಡಿದ್ದಾರೆ. ಪೊಲೀಸರು ಹಾಗೂ ಸೇವಕರಿಗೆ ಕೈಮುಗಿದು ಧನ್ಯವಾದ ಹೇಳುತ್ತಿದ್ದೇನೆ ಎಂದರು.

ಈ ಮೊದಲು ಮಹಾ ಕುಂಭಮೇಳಕ್ಕೆ ಬಾಲಿವುಡ್‌ ನ ಸೊನಾಲಿ ಬೆಂದ್ರೆ, ವಿಕ್ಕಿ ಕೌಶಲ್, ತಮನ್ನ ಭಾಟಿಯಾ, ರಾಜ್‌ ಕುಮಾರ್ ರಾವ್, ಹೇಮ ಮಾಲಿನಿ ಹಾಗೂ ಇನ್ನಿತರ ಸ್ಟಾರ್ ನಟರು ಭೇಟಿ ನೀಡಿ, ಪುಣ್ಯಸ್ನಾನ ಮಾಡಿದ್ದರು. ಮಹಾಶಿವರಾತ್ರಿಯಂದು ಮುಕ್ತಾಯಗೊಳ್ಳಲಿರುವ ಮಹಾ ಕುಂಭಮೇಳಕ್ಕೆ ಕೆಲವೇ ದಿನ ಬಾಕಿಯಿರುವಾಗ ನಟ ಅಕ್ಷಯ್ ಕುಮಾರ್ ಭೇಟಿ ನೀಡಿದ್ದಾರೆ.

See also  ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಮರವನ್ನೇರಿದ ಎಲಿಫೆಂಟ್ ಟಾಸ್ಕ್ ಫೋರ್ಸ್ ಸಿಬ್ಬಂದಿ…!ಮರವೇರಿ ಕುಳಿತ ನಂತರವೂ ಮರವನ್ನೇ ಅಲುಗಾಡಿಸಿದ ಕಾಡಾನೆ!!ವಿಡಿಯೋ ಸೆರೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget