ದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಮಹಾ ಕುಂಭಮೇಳದಲ್ಲಿ ಮಹಾಪ್ರಸಾದ ಬಡಿಸಿದ ಸುಧಾ ಮೂರ್ತಿ, ಪ್ರತಿದಿನ 40 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನಪ್ರಸಾದ ವಿತರಣೆ

ನ್ಯೂಸ್ ನಾಟೌಟ್: ಮಹಾ ಕುಂಭಮೇಳಕ್ಕೆ ತೆರಳಿರುವ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿಯವರ ಪತ್ನಿ ಮತ್ತು ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಇಸ್ಕಾನ್ ಶಿಬಿರದಲ್ಲಿ ಭಕ್ತರಿಗೆ ಮಹಾ ಅನ್ನಪ್ರಸಾದ ಬಡಿಸಿದ್ದಾರೆ. ಆಹಾರ ಕೌಂಟರ್‌ ನಲ್ಲಿ ನಿಂತು ಮಹಾ ಕುಂಭಮೇಳಕ್ಕೆ ಭೇಟಿ ನೀಡುವ ಭಕ್ತರಿಗೆ ಚಪಾತಿಗಳನ್ನು ವಿತರಿಸಿದ್ದಾರೆ.

ಮಹಾಪ್ರಸಾದ ತಯಾರಿಕೆಗೆ ಅದಾನಿ ಗ್ರೂಪ್ ಹಾಗೂ ಇಸ್ಕಾನ್ ಸಹಯೋಗದೊಂದಿಗೆ ನಿರ್ಮಿಸಲಾದ ಅಡುಗೆ ಮನೆಯಲ್ಲಿರುವ ಯಂತ್ರಗಳನ್ನು ಇದೇ ವೇಳೆ ಸುಧಾ ಮೂರ್ತಿಯವರು ವೀಕ್ಷಿಸಿದ್ದಾರೆ. ಮಹಾ ಕುಂಭಮೇಳ ಪ್ರದೇಶದಲ್ಲಿ ಪ್ರತಿದಿನ 40 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಮಹಾಪ್ರಸಾದವನ್ನು ವಿತರಿಸಲಾಗುತ್ತಿದೆ ಎನ್ನಲಾಗಿದೆ.
ಮಹಾಪ್ರಸಾದವನ್ನು ತಯಾರಿಸಲು ಬಳಸುವ ಅಡುಗೆಮನೆ ನೀರನ್ನು ಬಿಸಿಮಾಡಲು ಮತ್ತು ತರಕಾರಿಗಳು ಮತ್ತು ಅಕ್ಕಿಯನ್ನು ಬೇಯಿಸಲು ಬಾಯ್ಲರ್‌ ಗಳಂತಹ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ರೊಟ್ಟಿ ತಯಾರಿಸಲು ಮೂರು ದೊಡ್ಡ ಯಂತ್ರಗಳನ್ನು ಸ್ಥಾಪಿಸಲಾಗಿದೆ.

Click

https://newsnotout.com/2025/01/praveen-nettasru-cadr-21-man-arrested-by-helping-accused/
https://newsnotout.com/2025/01/10-year-old-boy-kannada-news-154-kg-mother-k-news-d/
https://newsnotout.com/2025/01/4-lakh-rupees-7-year-old-boy-sold-and-police/
https://newsnotout.com/2025/01/viral-girl-monalisa-bosle-madyapradesh/

Related posts

ಸೌದಿಯಲ್ಲಿ ಜೈಲು ಪಾಲಾದ ಮಂಗಳೂರಿನ ವ್ಯಕ್ತಿ..! 10 ವರ್ಷ ಲಾಂಡ್ರಿ ಅಂಗಡಿ ಇರಿಸಿಕೊಂಡಿದ್ದವ ಜೈಲು ಸೇರಿದ್ದೇಗೆ..?

ಅಮೆರಿಕಾಕ್ಕೆ ಅಕ್ರಮ ಪ್ರವೇಶಕ್ಕೆ ಯತ್ನ! ನದಿಯಲ್ಲಿ ಮುಳುಗಿ ಭಾರತೀಯರ ಸಾವು!

ಸೇತುವೆಯಿಂದ ಕೆರೆಗೆ ಬಿದ್ದ ಕಾಲೇಜು ವಿದ್ಯಾರ್ಥಿನಿ..! ಕೆರೆಗೆ ಧುಮುಕಿ ಆಕೆಯನ್ನು ರಕ್ಷಿಸಿದ ‘ಹೋಮ್ ಗಾರ್ಡ್’ ಸಿಬ್ಬಂದಿ