ಕ್ರೀಡೆ/ಸಿನಿಮಾ

ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಡಲಿದ್ದಾಳೆ ವೈರಲ್ ಸುಂದರಿ ಮೊನಾಲಿಸಾ..! ಶಿವಣ್ಣ ಜೊತೆ ಅಭಿನಯಕ್ಕೆ ರೆಡಿ,ಯಾವುದು ಆ ಸಿನಿಮಾ?

ನ್ಯೂಸ್‌ ನಾಟೌಟ್‌ : ಮಹಾ ಕುಂಭಮೇಳದಲ್ಲಿ ಜನ ಸಾಗರ ಕಿಕ್ಕಿರಿದು ತುಂಬಿದೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವಳಿ ಸಂಗಮದಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿ ಶಿವನ ಭಕ್ತಿಯಲ್ಲಿ ಮುಳುಗಿದ್ದು ಒಂದೆಡೆಯಾದರೆ ಮತ್ತೊಂದೆಡೆ ಮೋನಾಲಿಸಾ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಯುವತಿ ತನ್ನ ಸೌಂದರ್ಯದಿಂದ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದ್ದು ಭಾರಿ ಕುತೂಹಲಕ್ಕೆ ಕಾರಣವಾಗಿತ್ತು.

ಇದೀಗ ಈಕೆಗೆ ಬಾಲಿವುಡ್‌ನಿಂದಲೂ ಆಫರ್‌ ಬರುತ್ತಿದ್ದು,ಇತ್ತ ಕಡೆ ಸ್ಯಾಂಡಲ್‌ವುಡ್‌ಗೂ ಮೊನಾಲಿಸಾ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಿಂದ ಸೋಶಿಯಲ್​​ ಮೀಡಿಯಾದಲ್ಲಿ ಟ್ರೆಂಡ್‌ ಆಗಿರುವ ಮೊನಾಲಿಸಾಗೆ ಕನ್ನಡ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ ಎನ್ನಲಾಗಿದೆ. ಡಾ. ಶಿವರಾಜ್​ಕುಮಾರ್​ ಅವರ ಮುಂಬರುವ ಸಿನಿಮಾದಲ್ಲಿ ಈ ನೈಜ ಸುಂದರಿ ಮುಖ್ಯಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾಳೆ ಎನ್ನುವ ಸುದ್ದಿ ಓಡಾಡಿದೆ.

ತೆಲುಗು ಸಿನಿಮಾದಲ್ಲಿ ಮೊನಾಲಿಸಾ ಕಾಣಿಸಿಕೊಳ್ಳುತ್ತಾಳೆ ಎನ್ನುವ ಸುದ್ದಿ ಹರಿದಾಡುತ್ತಿದ್ದು,ಮಧ್ಯಪ್ರದೇಶದ ಇಂದೋರ್‌ ಈ ಮೋನಾಲಿಸಾ ರಾಮ್ ಚರಣ್, ಶಿವರಾಜ್​​​ಕುಮಾರ್ ನಟನೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಮಾಹಿತಿ ಇದೆ.​ ಬುಚ್ಚಿ ಬಾಬು ಸನಾ ನಿರ್ದೇಶನದ ಆರ್‌ಸಿ 16 ಚಿತ್ರದಲ್ಲಿ ರಾಮ್ ಚರಣ್ ನಾಯಕ ಮತ್ತು ಜಾನ್ವಿ ಕಪೂರ್ ಈಗಾಗಲೇ ನಾಯಕಿಯಾಗಿ ಫಿಕ್ಸ್ ಆಗಿದ್ದಾರೆ. ಇದೀಗ ಮೊನಾಲಿಸಾ ಹೆಸರು ಕೇಳಿ ಬರುತ್ತಿದೆ..

ಈ ಸಿನಿಮಾದ ಎರಡನೇ ಶೆಡ್ಯೂಲ್ ಜನವರಿ 27 ರಿಂದ ಪ್ರಾರಂಭವಾಗಲಿದ್ದು, ದಸರಾಗೆ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಇದರ ನಡುವೆ ವೈರಲ್‌ ಬೆಡಗಿ ಮೊನಾಲಿಸಾ ಈ ಸಿನಿಮಾದಲ್ಲಿ ನಟಿಸುತ್ತಿರುವುದು ಸಖತ್‌ ಸದ್ದು ಮಾಡುತ್ತಿದೆ..

Related posts

ಪ್ರೇಮಲೋಕ, ಪುಟ್ನಂಜ ಸೇರಿದಂತೆ 900ಕ್ಕೂ ಅಧಿಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಖ್ಯಾತ ಸಾಹಸ ನಿರ್ದೇಶಕ ಇನ್ನಿಲ್ಲ..!ಬೈಕ್ ಮೆಕ್ಯಾನಿಕ್ ಆಗಿ ವೃತ್ತಿ ಆರಂಭಿಸಿದ್ದ ಜಾಲಿ ಬಾಸ್ಟಿನ್​ ಅವರ ಸ್ಪೂರ್ತಿದಾಯಕ ಕಥೆ ಇಲ್ಲಿದೆ ಓದಿ..

ವಿಶ್ವಕಪ್ ಅಂಧರ ಟಿ೨೦ ಕ್ರಿಕೆಟ್‌ಗೆ ವೇದಿಕೆ ಸಜ್ಜು, ಡಿ.೫ರಿಂದ ಮಹಾ ಸಮರ

ತೆರೆ ಮೇಲೆ ಮೋಡಿ ಮಾಡಲು ಜಗಪ್ಪ- ಸುಶ್ಮಿತಾ ಜೋಡಿ ರೆಡಿ, ಇತ್ತೀಚೆಗಷ್ಟೆ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿದ್ದ ದಂಪತಿ