ಕ್ರೈಂವೈರಲ್ ನ್ಯೂಸ್

ಮಹಾಕಾಳೇಶ್ವರನ ಭಸ್ಮ ಆರತಿ ವೇಳೆ ಭಾರೀ ಅಗ್ನಿ ಅವಘಡ..! ಹೋಳಿ ಸಂಭ್ರಮದಂದು 14 ಅರ್ಚಕರಿಗೆ ಹತ್ತಿಕೊಂಡ ಬೆಂಕಿ..!

ನ್ಯೂಸ್ ನಾಟೌಟ್: ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ (ಮಾ.25) ಸೋಮವಾರ ಬೆಂಕಿ ಅವಘಡ ಸಂಭವಿಸಿದ್ದು, ಕನಿಷ್ಠ 14 ಅರ್ಚಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೋಳಿ ಹಬ್ಬದ ಪ್ರಯುಕ್ತ ದೇವಾಲಯದ ಗರ್ಭಗುಡಿಯಲ್ಲಿ ಭಸ್ಮ ಆರತಿ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಹೋಳಿ ಆಚರಿಸಲು ಗುಲಾಲ್ ಎಸೆಯಲಾಗುತ್ತಿತ್ತು. ಈ ವೇಳೆ ಕೆಲ ಗುಲಾಲ್‌, ಕರ್ಪೂರವನ್ನು ಹೊಂದಿದ್ದ ಪೂಜೆಯ ತಾಲಿಯ ಮೇಲೆ ಬಿದ್ದವು. ಕರ್ಪೂರ ನೆಲದ ಮೇಲೆ ಬಿದ್ದು ಬೆಂಕಿ ವ್ಯಾಪಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ಘಟನೆ ದೃಶ್ಯ ದೇವಸ್ಥಾನದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ. 14 ಪುರೋಹಿತರಿಗೆ ಸುಟ್ಟ ಗಾಯಗಳಾಗಿದ್ದು, ಕೆಲವರು ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂಟು ಮಂದಿ ಇಂದೋರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಜಿಲ್ಲಾ ಪಂಚಾಯತ್ ಸಿಇಒ ಮೃಣಾಲ್ ಮೀನಾ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಅನುಕೂಲ್ ಜೈನ್ ಅವರು ತನಿಖೆ ನಡೆಸಿ ವರದಿ ನೀಡುತ್ತಾರೆ ಎನ್ನಲಾಗಿದೆ.

Related posts

ಸರ್ಕಾರಿ ನೌಕರರು 2ನೇ ಮದುವೆಯಾಗುವಂತಿಲ್ಲ ಎಂದ ಸರ್ಕಾರ! ಏನಿದು ಹೊಸ ಆದೇಶ?

ಮದುವೆಗೆ ಬಂದ ವೀಡಿಯೊಗ್ರಾಫರ್ ವರನ ತಂಗಿ ಜೊತೆ ಪರಾರಿ..! ಇಲ್ಲಿದೆ ವಿಚಿತ್ರ ಪೇಮ ಕಹಾನಿ

ಮಂಗಳೂರು: ಖತರ್ನಾಕ್ ಸರಗಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು..ಖದೀಮ ಕಳ್ಳರು ಕದ್ದಿದ್ದೆಷ್ಟು ಗೊತ್ತಾ?