ವೈರಲ್ ನ್ಯೂಸ್ಸಿನಿಮಾ

ಮಹಾರಾಣಿ ಯೇಸುಬಾಯಿಯಾಗಿ ಕಾಣಿಸಿಕೊಳ್ಳಲಿದ್ದಾರೆ ರಶ್ಮಿಕಾ ಮಂದಣ್ಣ, ಐತಿಹಾಸಿಕ ಪಾತ್ರದಲ್ಲಿ ಕೊಡಗಿನ ಬೆಡಗಿ

212

ನ್ಯೂಸ್ ನಾಟೌಟ್: ಬಾಲಿವುಡ್​ ಬಹುಬೇಡಿಕೆ ನಟ ವಿಕ್ಕಿ ಕೌಶಲ್ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಪೀರಿಯಾಡಿಕಲ್​​ ಡ್ರಾಮಾ ‘ಛಾವಾ’ದ ಬಿಡುಗಡೆ ದಿನಾಂಕ ಸಮೀಪಿಸುತ್ತಿದೆ. ನಿನ್ನೆಯಷ್ಟೇ, ಚಿತ್ರದಿಂದ ವಿಕ್ಕಿ ಕೌಶಲ್ ಪೋಸ್ಟರ್ ಅನಾವರಣಗೊಳಿಸಲಾಗಿತ್ತು. ವಿವಿಧ ನೋಟಗಳಲ್ಲಿ ನಾಯಕ ನಟನ ದರ್ಶನವಾಗಿತ್ತು. ರಶ್ಮಿಕಾ ಮಂದಣ್ಣ ಫಸ್ಟ್ ಲುಕ್ ಅನ್ನು ಬಿಡುಗಡೆಗೊಳಿಸಲಾಗಿದೆ.

‘ಛಾವಾ’ ಚಿತ್ರದ ಹಿಂದಿರುವ ‘ಮ್ಯಾಡಾಕ್​ ಫಿಲ್ಮ್ಸ್’ ಇಂದು ನಾಯಕ ನಟಿ ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್ ಪೋಸ್ಟರ್‌ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಎರಡು ಪೋಸ್ಟರ್‌ಗಳನ್ನು ಶೇರ್ ಮಾಡಲಾಗಿದ್ದು, ಇದರಲ್ಲಿ ರಶ್ಮಿಕಾ ‘ಯೇಸುಬಾಯಿ ಭೋಸಲೆ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಛಾವಾ’ ಚಿತ್ರದ ಟ್ರೇಲರ್ ನಾಳೆ(ಜ.22) ರಿಲೀಸ್​ ಆಗಲಿದೆ. ಅದಕ್ಕೂ ಮುನ್ನ ಹಿಸ್ಟಾರಿಕಲ್​ ಆ್ಯಕ್ಷನ್​ ಸಿನಿಮಾದಿಂದ ‘ರಶ್ಮಿಕಾ ಮಂದಣ್ಣ’ ಅವರ ನೋಟ ಅನಾವರಣಗೊಳಿಸಿ ಸಿನಿಮಾ ಸುತ್ತಲಿನ ಕ್ರೇಜ್​ ಹೆಚ್ಚಿಸಿದ್ದಾರೆ ನಿರ್ಮಾಪಕರು.ಸಿನಿಮಾ ಫೆಬ್ರವರಿ 14, 2025ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

Click

https://newsnotout.com/2025/01/it-raid-on-telugu-cinema-producers-kannada-news-viral-news-d/
https://newsnotout.com/2025/01/bus-incident-kananda-news-bengaluru-viral-news-arrested/
https://newsnotout.com/2025/01/kannada-news-duplicate-number-plate-viral-news-vehicle/
https://newsnotout.com/2025/01/naxal-in-chattisghar-viral-encounter-kannada-news-df/
https://newsnotout.com/2025/01/darshan-actor-kannada-news-darshan-police-gun-licence/
https://newsnotout.com/2025/01/kodagu-elephant-issue-canteen-viral-news-d/
See also  ಎ.ಆರ್‌.ರೆಹಮಾನ್‌ ತಂಡದಲ್ಲಿದ್ದ ಗಿಟಾರ್ ವಾದಕಿಯೂ ಗಂಡನಿಂದ ವಿಚ್ಚೇದನ..! ಎ.ಆರ್‌.ರೆಹಮಾನ್‌ ಪತ್ನಿ ವಿಚ್ಚೇದನ ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget