ಕರಾವಳಿಕೊಡಗುಕ್ರೈಂಸುಳ್ಯ

ಮಡಿಕೇರಿ: ಮಿತಿಮೀರಿದ ಕಾಡಾನೆ ಹಾವಳಿ, ಭಯದ ನೆರಳಲ್ಲಿ ಶಾಲಾ ಮಕ್ಕಳು, ಪೋಷಕರು..! ಶಾಲಾ ಮಕ್ಕಳನ್ನು ತಮ್ಮ ವಾಹನದಲ್ಲೇ ಮನೆಮನೆಗೆ ತಲುಪಿಸಿದ ಅರಣ್ಯ ಇಲಾಖೆ

219

ನ್ಯೂಸ್ ನಾಟೌಟ್: ಈ ಕಾಡಾನೆಗಳ ಹಾವಳಿ ಕೊಡಗಿನ ಮಡಿಕೇರಿ ಸುತ್ತಮುತ್ತ ಹೆಚ್ಚಾಗುತ್ತಿದೆ. ಕಾಡಾನೆಯೊಂದು ಚಲಿಸುತ್ತಿದ್ದ ವಾಹನದ ಮೇಲೆ ಸುಂಟಿಕೊಪ್ಪದಲ್ಲಿ ದಾಳಿ ನಡೆಸಿದ ಬೆನ್ನಲ್ಲೇ ಇದೀಗ ಮಡಿಕೇರಿ ತಾಲೂಕಿನ ಅರೆಕಾಡು ಸಮೀಪ ಕಾಡಾನೆಗಳು ಶನಿವಾರ ಪ್ರತ್ಯಕ್ಷಗೊಂಡಿವೆ. ಇದರಿಂದ ಶಾಲೆಯೊಳಗಿದ್ದ ಮಕ್ಕಳು, ಅಧ್ಯಾಪಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಕಾಡಾನೆಗಳು ಪ್ರತ್ಯಕ್ಷಗೊಂಡ ಬೆನ್ನಲ್ಲೇ ಅರಣ್ಯ ಇಲಾಖೆ ಸಿಬ್ಬಂದಿ ಶಾಲೆ ಬಳಿ ಆಗಮಿಸಿದ್ದಾರೆ. ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮುಂಜಾಗೃತಾ ಕ್ರಮವಾಗಿ ಅರಣ್ಯ ಇಲಾಖೆ ವಾಹನದಲ್ಲೇ ಶಾಲಾ ವಿದ್ಯಾರ್ಥಿಗಳನ್ನು ಮನೆ ಮನೆಗೆ ತಲುಪಿಸಲಾಯಿತು. ಅರಣ್ಯ ಇಲಾಖೆ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೂ ಇದೀಗ ಪೋಷಕರು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಮೂಲಗಳು ತಿಳಿಸುತ್ತಿವೆ.

https://newsnotout.com/2024/06/bus-pm-oath-kannada-news-jammu-and-kashmir
See also  ಕಲ್ಲುಗುಂಡಿ: ಅನಾರೋಗ್ಯದಿಂದ ಜೀಪು ಚಾಲಕ ಸಾವು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget