ಕೊಡಗು

ಮಡಿಕೇರಿ:ಕುಕ್ಕೆ ಸುಬ್ರಹ್ಮಣ್ಯನ ದರ್ಶನಕ್ಕೆಂದು ಬಸ್ ಹತ್ತಿದವಳ ಕರಿಮಣಿ ಸರ ಎಗರಿಸಿದ ಕಳ್ರು..!,ತಾಳಿ ಕಳ್ಕೊಂಡು ಕಣ್ಣೀರಿಟ್ಟ ಮಹಿಳೆ

181

ನ್ಯೂಸ್ ನಾಟೌಟ್ : ಕುಕ್ಕೆ ಸುಬ್ರಹ್ಮಣ್ಯಕ್ಕೆ ದೇವರ ದರ್ಶನಕ್ಕಾಗಿ ಬಂದ ಕೊಡಗು ಮೂಲದ ಮಹಿಳೆಯೊಬ್ಬರ ಕರಿಮಣಿಯನ್ನು ಕಳ್ಳರು ಎಗರಿಸಿರುವ ಬಗ್ಗೆ ವರದಿಯಾಗಿದೆ.ದೇವರ ದರ್ಶನ ಪಡೆದು ವಾಪಾಸ್ ಮನೆ ಕಡೆ ತೆರಳುತ್ತಿದ್ದ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ.

ಕೊಡಗು ಜಿಲ್ಲೆಯ ಸೋಮವಾರ ಸಂತೆ ನಿವಾಸಿಯಾದ ಶ್ರೀಮತಿ ಲೀಲಾ ಎಂಬವರು ಕರಿಮಣಿ ಕಳೆದು ಕೊಂಡಿರುವ ಮಹಿಳೆ.ಇವರು ಊರಿನ ಇತರರೊಂದಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆಂದು ಬಂದಿದ್ದರು.ಮಧ್ಯಾಹ್ನ ವೇಳೆಗೆ ದೇವರ ದರ್ಶನ ಪಡೆದು ವಾಪಾಸ್ ಮನೆ ಕಡೆ ತೆರಳೆಂದು ಬಸ್‌ ಸ್ಟ್ಯಾಂಡ್ ಕಡೆಗೆ ಬಂದಿದ್ದರು. ಈ ಸಂದರ್ಭ ಹಾಸನ-ಬೆಂಗಳೂರು ಬಸ್‌ಗೆ ಇತರರೊಂದಿಗೆ ಹತ್ತಲು ಮುಂದಾಗಿದ್ದಾರೆ.ಬಸ್‌ ಹತ್ತೋ ವೇಳೆ ಭಾರಿ ರಶ್ ಕಂಡು ಬಂದಿದ್ದು,ಸೀಟ್‌ನಲ್ಲಿ ಕುಳಿತುಕೊಂಡಾಗ ಕೊರಳಲ್ಲಿದ್ದ ಕರಿಮಣಿ ಕಾಣೆಯಾಗಿತ್ತು.

ಅಂದಾಜು 87,000 ರೂ. ಮೌಲ್ಯದ ಮಾಂಗಲ್ಯ ಸರವನ್ನು ಕಳ್ಳತನವಾಗಿದ್ದು, ಸುಮಾರು 25 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಎನ್ನಲಾಗಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://www.youtube.com/watch?v=5LGGgEyAxwM
See also  ಸಂಪಾಜೆ: ಸ್ಥಳೀಯರ ನಿದ್ದೆಗೆಡಿಸಿದ ಒಂಟಿ ಸಲಗ, ಧೈರ್ಯ ತುಂಬಿದ ಕೆಪಿಸಿಸಿ ಕಾರ್ಯದರ್ಶಿ ಟಿಎಂ ಶಾಹಿದ್
  Ad Widget   Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget