ಮಡಿಕೇರಿ: ಸೈಟ್ ತೋರಿಸಲು ಹೋದವನಿಗೆ ಸುಂದರಿ ಕಂಡು ಸಡನ್ ಮೂಡ್ ಚೇಂಜ್..! ಲೈಟಾಗಿ ಮಹಿಳೆಯ ಮೈ ಮುಟ್ಟಿದವನಿಗೆ ಪೊಲೀಸರಿಂದ ಬಾಸುಂಡೆ..!
ನ್ಯೂಸ್ ನಾಟೌಟ್: ಸೈಟ್ ತೋರಿಸಲು ಹೋದವನೊಬ್ಬ ಮಹಿಳೆಯ ಮೈ ಮುಟ್ಟಿ ಅಸಹ್ಯವಾಗಿ ವರ್ತಿಸಿದವ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು ವ್ಯಕ್ತಿಯನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಮಹಿಳೆ ಕೊಡಗು ಜಿಲ್ಲೆಯ ಮಡಿಕೇರಿಯವರಾಗಿದ್ದಾರೆ. ಮಂಗಳೂರು ಮತ್ತು ದುಬೈನಲ್ಲಿ ಕೆಲಸದಲ್ಲಿದ್ದರು. ಅವರನ್ನು ಬಿಲ್ಡರ್ ಆಗಿರುವ ರಶೀದ್ ಎಂಬಾತ ಕುಶಾಲನಗರದಲ್ಲಿ ಒಳ್ಳೆಯ ಸೈಟ್ ಇದೆ ಬನ್ನಿ ಖರೀದಿಸಬಹುದು ಎಂದು ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ಅ.21ರಂದು ಕಾರಿನಲ್ಲಿ ಕುಶಾಲನಗರಕ್ಕೆ ಆತನೊಂದಿಗೆ ಹೋಗಿದ್ದೆ. ಅಲ್ಲಿ ಆತ ಅನುಚಿತವಾಗಿ ವರ್ತಿಸಿದಾಗ ತಾನು ವಿರೋಧಿಸಿದೆ. ಅಲ್ಲದೆ ಆರೋಪಿ ರಶೀದ್ ಕಾರಿನಲ್ಲಿ ಮಂಗಳೂರಿಗೆ ಮರಳುವಾಗಲೂ ದಾರಿ ಮಧ್ಯೆ ಹಣದ ಆಮಿಷ ತೋರಿಸಿ ಲೈಂಗಿಕ ದೌರ್ಜನ್ಯವೆಸಗಿ ಕೊನೆಗೆ ಫ್ಲ್ಯಾಟ್ ಗೆ ತಂದು ಬಿಟ್ಟಿದ್ದಾನೆ ಎಂದು ಮಹಿಳೆ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.