ನ್ಯೂಸ್ ನಾಟೌಟ್: ಹಿಂಬದಿಯಿಂದ ಬಂದ ವ್ಯಕ್ತಿಯೊಬ್ಬ ಕಾಫಿ ಬೆಳೆಗಾರನ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ ಘಟನೆಗೆ ಸಂಬಂಧ ಪಟ್ಟ ಹಾಗೆ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಡಿಕೇರಿಯ ಚೆಟ್ಟಳ್ಳಿ ಬಳಿಯ ಅಭ್ಯತ್ ಮಂಗಲ ಗ್ರಾಮದಲ್ಲಿ ವಿನಯ್ ಕುಮಾರ್ (53) ಎಂಬವರನ್ನು ಹಿಂಬದಿಯಿಂದ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು.
ಇದೀಗ ಕೊಲೆಗೀಡಾದ ವಿನಯ್ ಕುಮಾರ್ ಅಣ್ಣ ಎಸ್. ಸುಬ್ಬಯ್ಯ (72) ಎಂಬವರನ್ನು ಬಂಧಿಸಲಾಗಿದೆ.ಸಹೋದರರ ನಡುವೆ ಆಸ್ತಿ ವಿವಾದವಿತ್ತು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.ಇಂದು (ಮೇ 6ರ ಮಂಗಳವಾರ) ಬೆಳಿಗ್ಗೆ 11:45 ರ ಸುಮಾರಿಗೆ ಸುಬ್ಬಯ್ಯ ತನ್ನ ಮನೆಯಿಂದ ತನ್ನ SBBL ಬಂದೂಕನ್ನು ತೆಗೆದುಕೊಂಡು ತನ್ನ ಕಿರಿಯ ಸಹೋದರನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿ ಸುಬ್ಬಯ್ಯನನ್ನು ಬಂಧಿಸಲಾಗಿದ್ದು, ಆತನನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.
ಏನಿದು ಘಟನೆ?
ಕಾಫಿ ಬೆಳೆಗಾರರಾಗಿರುವ ವಿನಯ್ ಅವರು ಅಭ್ಯತ್ ಮಂಗಲ ಗ್ರಾಮದ ತೋಟದಲ್ಲಿದ್ದ ಪೈಪ್ ಗಳನ್ನು ಇಬ್ಬರು ಕಾರ್ಮಿಕರ ಸಹಕಾರದಿಂದ ಗೋದಾಮಿಗೆ ಸಾಗಿಸಿ ದಾಸ್ತಾನು ಮಾಡುವ ಕೆಲಸದಲ್ಲಿ ನಿರತರಾಗಿದ್ದರು. ಈ ಸಂದರ್ಭ ಹಿಂಬದಿಯಿಂದ ಬಂದು ಗುಂಡು ಹಾರಿಸಿದ್ದು ವಿನಯ್ ಕುಮಾರ್ ಅವರು ಪ್ರಜ್ಞೆ ತಪ್ಪಿ ಬಿದ್ದರು.ಗುಂಡಿನ ಸದ್ದು ಕೇಳುತ್ತಿದ್ದಂತೆ ಕಾರ್ಮಿಕರು ಸ್ಥಳ್ಕಾಗಮಿಸಿದ ವೇಳೆ ಕೊಳಂಬೆ ವಿನು ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದರು.