ಕೊಡಗುಕ್ರೈಂವೈರಲ್ ನ್ಯೂಸ್

ಮಡಿಕೇರಿ: ಸಿದ್ದು, ಡಿಕೆಶಿಯನ್ನ ಪೊಲೀಸ್‌ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಳ್ಳಿ ಎಂದದ್ದೇಕೆ ಪ್ರತಾಪ್‌ ಸಿಂಹ? 21 ಆರೋಪಿಗಳನ್ನು ಬಂಧಿಸಿದ್ದೇಕೆ ಪೊಲೀಸರು?

271

ನ್ಯೂಸ್ ನಾಟೌಟ್: ಬಿಜೆಪಿ ಕಾರ್ಯಕರ್ತರನ್ನು ಪೊಲೀಸ್ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸುವ ಬದಲು, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಪೊಲೀಸರು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಬೇಕು‌ ಎಂದು ಸಂಸದ ಪ್ರತಾಪ್ ಸಿಂಹ (Pratap Simmha) ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

ಮಡಿಕೇರಿಯಲ್ಲಿ (Madikeri) ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದು ಆರು ತಿಂಗಳ ಅವಧಿಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಒಂದಲ್ಲ ಒಂದು ರೀತಿಯಲ್ಲಿ ಮಾನಸಿಕವಾಗಿ ಪೊಲೀಸರಿಂದ ತೊಂದರೆ ನೀಡಲಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಆಗಿರುವ ಭ್ರಷ್ಟಾಚಾರದ ಬಗ್ಗೆ ಪೇಸ್‌ಬುಕ್‌ನಲ್ಲಿ ಬರೆದುಕೊಂಡರೆ ಪೊಲೀಸ್ ಠಾಣೆಗೆ ಕಾರ್ಯಕರ್ತರನ್ನು ಕರೆಸಿ ಮುಚ್ಚಳಿಕೆ ಬರೆಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಅದರ ಬದಲು, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

42 ಕೋಟಿ ರೂ. ಕರ್ನಾಟಕದಿಂದ ಲೂಟಿ ಮಾಡಿ ತೆಲಂಗಾಣಕ್ಕೆ ಕಳಿಸಿಕೊಟ್ಟಿದ್ದಾರೆ‌ ಎಂದು ನಮ್ಮ ಒಬ್ಬ ಕಾರ್ಯಕರ್ತ ಪೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ನವರು ದೂರು ನೀಡಿದ್ದಾರೆ. ಅವರನ್ನು ಪೊಲೀಸ್ ಠಾಣೆಗೆ ಕರೆಸಿ ಯಾಕೆ ಪೋಸ್ಟ್ ಮಾಡಿದೆ? ಡಿಲಿಟ್ ಮಾಡು, ಮುಚ್ಚಳಿಕೆ ಬರೆದುಕೊಡು. ಇನ್ಮುಂದೆ ತಪ್ಪು ಮಾಡುವುದಿಲ್ಲ ಅಂತ ಎಂದು ‌ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಮರುದಿನವೇ ಮತ್ತೆ 10 ಗಂಟೆಗೆ ಬಾ ಎಂದು ತೊಂದರೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ನಾನು ವಿರಾಜಪೇಟೆ ಗ್ರಾಮಾಂತರ ಠಾಣೆಗೆ ಹೋಗಿ ನೇರವಾಗಿ ಕೇಳಿದ್ದೇನೆ. ಈ ರೀತಿಯ ಮುಚ್ಚಳಿಕೆ ಬರೆಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇದ್ರೆ ಮೊದಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಕಳಿಸಿ. ಕಾರಣ ಈ ಹಿಂದೆ ಬಿಜೆಪಿ ಸರ್ಕಾರ ಇರುವಂತಹ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿ ಸೀಟ್ ಎರಡೂವರೆ ಕೋಟಿ ರೂ., ಬಿಡಿಎ ಛೇರ್ಮನ್ ನೂರು ಕೋಟಿ ರೂ., ಕಾವೇರಿ ನೀರಾವರಿ ನಿಗಮದ ಅದ್ಯಕ್ಷ ಸ್ಥಾನಕ್ಕೆ ಇಷ್ಟು ಕೋಟಿ ರೂ., ಡಿಸಿ ಪೋಸ್ಟ್‌ಗೆ ಇಷ್ಟು ಕೋಟಿ, ಎಸ್‌ಪಿ ಪೋಸ್ಟ್‌ಗೆ ಇಷ್ಟು. ಎಲ್ಲಾ ಪೇಪರ್‌ಗಳಲ್ಲಿ ಜಾಹೀರಾತು ಕೊಟ್ರು. ಪೇ ಸಿಎಂ ಎಂದು ಊರು ಊರಿಗೆ ತಮಟೆ ಹೊಡೆದಿದ್ದಾರೆ. ಆಗ 40% ಅಂತ ತಮಟೆ ಹೊಡೆದರು ಎಂದು ಕಾಂಗ್ರೆಸ್‌ ವಿರುದ್ಧ ಗುಡುಗಿದ್ದಾರೆ.

ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ 21 ಮಂದಿಯನ್ನು ಪೊಲೀಸರು ಬಂಧಿಸಿ ಚಳಿ ಬಿಡಿಸಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಇವರು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು,21 ಆರೋಪಿಗಳಿಗೆ ನ್ಯಾಯಾಲಯ ಸಮನ್ಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದರು.ಈ ಹಿನ್ನಲೆಯಲ್ಲಿ 21 ಮಂದಿ ಆರೋಪಿಗಳನ್ನು ಮಡಿಕೇರಿ ಗ್ರಾಮಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

https://newsnotout.com/2023/11/metro-and-love-issue-video-viral/
See also  ಮಂಗಳೂರು: ಸಮುದ್ರ ತೀರದಲ್ಲಿ ನಿಗೂಢವಾಗಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆ..! ಕೊಲೆಯಾಗಿರೋ ಶಂಕೆ..!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget