ಕ್ರೈಂ

ಮಡಿಕೇರಿ: ಯುವಕನ ಜೀವ ತೆಗೆದ ಅಲ್ಯುಮಿನಿಯಂ ಏಣಿ..!

ಮಡಿಕೇರಿ: ಅಲ್ಯುಮಿನಿಯಂ ಏಣಿ ಏರಿ ತೋಟದಲ್ಲಿ ಕರಿಮೆಣಸು ಕೊಯ್ಯುತ್ತಿದ್ದ ಸಂದರ್ಭ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ರಂಗ ಸಮುದ್ರದ ನವೀನ್ ಅವರ ಪುತ್ರ ದೀಕ್ಷಿತ್ (23) ಮೃತ ದುರ್ದೈವಿ. ವಿದ್ಯುತ್‌ ಲೈನ್‌ ಗೆ ಏಣಿ ಸ್ಪರ್ಶಗೊಂಡು ಜೀವ ಹಾನಿಯಾಗಿದ್ದು ತೋಟದ ನಡುವೆ ಇಂತಹ ದುರಂತ ಆಗಾಗ್ಗೆ ಸಂಭವಿಸುತ್ತಿದೆ. ಈ ಅನಾಹುತ ತಪ್ಪಿಸಲು ಸರಕಾರ ಪರ್ಯಾಯ ವ್ಯವಸ್ಥೆಯನ್ನು ಕರಿಮೆಣಸು ಬೆಳೆಗಾರರಿಗೆ ಮಾಡುವುದಾಗಿ ತಿಳಿಸಿತ್ತು. ಆದರೆ ಇದುವರೆಗೆ ಕ್ರಮ ತೆಗೆದುಕೊಂಡಿಲ್ಲ ಎಂದು ಕಾರ್ಮಿಕ ಸಂಘಟನೆ ಜಿಲ್ಲಾಧ್ಯಕ್ಷ ಎಚ್‌.ಎಂ.ಸೋಮಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

Related posts

ಮಂಗಳೂರಿನಲ್ಲಿ ಗಾಂಜಾ ದಂಧೆ ಬಯಲು: ಎಂಬಿಬಿಎಸ್ ವಿದ್ಯಾರ್ಥಿಗಳು ಸೇರಿ ೧೦ ಮಂದಿ ಆರೋಪಿಗಳ ಬಂಧನ

ಗೇಮಿಂಗ್​ ಆ್ಯಪ್ ​ನಲ್ಲಿ 1.5 ಕೋಟಿ ರೂ. ಗೆದ್ದದ್ದು ಹೇಗೆ ಪೊಲೀಸ್ ಅಧಿಕಾರಿ..? ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ ಪಿಎಸ್​ಐ ಹೇಳಿದ್ದೇನು?

ಬೈಕ್ ಮೇಲೆ 1.61 ಲಕ್ಷ ರೂ. ಟ್ರಾಫಿಕ್ ದಂಡವಿದ್ದರೂ ಬಿಂದಾಸ್ ಸುತ್ತಾಟ..! ಆರೋಪಿ ಪೊಲೀಸ್ ವಶಕ್ಕೆ..!