ಕೊಡಗುಕ್ರೈಂ

ಮಡಿಕೇರಿ: ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಖಾಸಗಿ ಅಂಗ ಪ್ರದರ್ಶಿಸಿ ಹುಚ್ಚಾಟ ತೋರಿದ್ದ ಪ್ರಕರಣ, ಆಟೋ ಚಾಲಕನನ್ನು ಬಂಧಿಸಿದ ಮಡಿಕೇರಿ ಪೊಲೀಸರು

ನ್ಯೂಸ್ ನಾಟೌಟ್: ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿರುವ ಮೆಡಿಕಲ್ ಕಾಲೇಜಿನ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನುಬಂಧಿಸುವಲ್ಲಿ ಮಡಿಕೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣಕ್ಕೆ ಸಂಧಿಸಿದಂತೆ ಕಡಗದಾಳು ಪಂಚಾಯಿತಿ ವ್ಯಾಪ್ತಿಯ ಕತ್ತಲೆಕಾಡು ನಿವಾಸಿ, ಆಟೋ ಚಾಲಕ ಸಿಜಿಲ್(22) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ

ಕೊಡಗಿನ ಸುಂದರ ಪರಿಸರದ ಅತ್ಯಂತ ಎತ್ತರದ ಪ್ರದೇಶದಲ್ಲಿ ಭವ್ಯವಾಗಿ ತಲೆ ಎತ್ತಿರುವ ಮೆಡಿಕಲ್ ಕಾಲೇಜಿನ ಕ್ಯಾಂಪಸ್‌ನಲ್ಲಿ ಕಳೆದ ಮೂರು ದಿನಗಳ ಹಿಂದೆ ಹಿಂದೆ ವಿದ್ಯಾರ್ಥಿನಿಯರ ಹಾಸ್ಟೆಲ್ ಎದುರು ಕಾಮುಕನೊಬ್ಬ ಅಶ್ಲೀಲ ವರ್ತನೆ ತೋರಿದ್ದ. ವಿದ್ಯಾರ್ಥಿನಿಯರನ್ನು ಚುಡಾಯಿಸುವುದರ ಜತೆಗೆ ಸಾರ್ವಜನಿಕವಾಗಿ ತನ್ನ ಖಾಸಗಿ ಅಂಗ ಪ್ರದರ್ಶಿಸಿ ಹುಚ್ಚಾಟ ತೋರಿದ್ದ. ಈ ದೃಶ್ಯ ಸಿಸಿ ಕ್ಯಾಮರದಲ್ಲೂ ಸೆರೆಯಾಗಿತ್ತು.

ಈ ಘಟನೆಯಿಂದ ನೊಂದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಮಡಿಕೇರಿಯ ಮೆಡಿಕಲ್ ಕಾಲೇಜಿನಲ್ಲಿ ಸೂಕ್ತ ರಕ್ಷಣೆ ಇಲ್ಲ ಅಂತ ಆರೋಪಿಸಿ‌ ಪ್ರತಿಭಟನೆ ನಡೆಸಿದ್ದರು. ಯಾವುದೇ ಭಯವಿಲ್ಲದೆ ಕತ್ತಲಲ್ಲಿ ಹುಡುಗಿಯರ ಹಾಸ್ಟೇಲ್ ಗೆ ನುಗ್ಗುವ ಕಾಮುಕರನ್ನು ಬಂಧಿಸುವಂತೆ ಆಗ್ರಹ ಕೇಳಿಬಂದಿತ್ತು. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರತಿಭಟನೆ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಓರ್ವನನ್ನು ಬಂಧಿಸಿದ್ದು, ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಈತ ಹಾಗೂ ಕೆಲವು ಸಹಚರರು ಕುಡಿದ ಮತ್ತಿನಲ್ಲಿ ಕ್ಯಾಂಪಸ್ ಪ್ರವೇಶಿಸಿ ಅಲ್ಲಿನ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.

Related posts

ಪಾಲಡ್ಕ: ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ..! ಬೈಕ್ ಸವಾರನಿಗೆ ಗಾಯ

ಸಂಪಾಜೆ: ಪ್ರಧಾನಿಯಾಗಿ ಮೋದಿ ಪ್ರಮಾಣ ವಚನಕ್ಕೂ ಮುನ್ನ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ 1 ಕಿ.ಮೀ. ತನಕ ಹಣ್ಣಿನ ಗಿಡಗಳನ್ನು ನೆಟ್ಟ ಆದರ್ಶ ಫ್ರೆಂಡ್ಸ್ , ಪರಿಸರ ಪ್ರೇಮದೊಂದಿಗೆ ನೆನಪೂ ಶಾಶ್ವತ ಅಂತಾರೆ ಗೆಳೆಯರು..!

ಸಲ್ಮಾನ್ ಖಾನ್ ಆಯ್ತು ಈಗ ಶಾರುಕ್ ಖಾನ್‌ ಗೂ ಜೀವ ಬೆದರಿಕೆ ಕರೆ..!50 ಲಕ್ಷ ರೂ. ಪಾವತಿಸುವಂತೆ ಬೇಡಿಕೆ..!