ಕೊಡಗುಕ್ರೈಂ

ಮಡಿಕೇರಿ: ಕಾಟಗೇರಿ ಬಳಿ ಭೀಕರ ಅಪಘಾತಕ್ಕೆ MBBS ವಿದ್ಯಾರ್ಥಿ ಬಲಿ, ಲಾರಿಗೆ ಡಿಕ್ಕಿಯಾಗಿ ಛಿದ್ರಗೊಂಡ ಜೀವ..!

196

ನ್ಯೂಸ್ ನಾಟೌಟ್: ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಕೊಡಗು ಜಿಲ್ಲೆ ಮಡಿಕೇರಿಯ ಮೆಡಿಕಲ್ ಕಾಲೇಜು ವಿದ್ಯಾರ್ಥಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮೃತರನ್ನು ಮಡಿಕೇರಿಯ ಮೆಡೀಕಲ್ ಕಾಲೇಜಿನ ಅಂತಿಮ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ವಿಜೇಶ್ ಮೂಲತಃ ಉಡುಪಿಯವರಾಗಿದ್ದು ಸ್ನೇಹಿತರೊಂದಿಗೆ ಮನೆಗೆ ತೆರಳಿ ಹಿಂತಿರುಗಿ ಮಡಿಕೇರಿಯ ಕಾಲೇಜು ಬರುವ ಸಂಧರ್ಭ ಈ ಒಂದು ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮಡಿಕೇರಿ ಹೊರವಲಯದ ಕಾಟಗೇರಿ ಜಂಕ್ಷನ್ ಬಳಿಯ ಪ್ರಾಶಾಂತಿ ರೆಸಾರ್ಟ್ ಬಳಿ ಈ ಒಂದು ಅಪಘಾತ ಸಂಭವಿಸಿದೆ. ಮಡಿಕೇರಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಹಾಲಿನ ಲಾರಿ ಹಾಗೂ ಮಡಿಕೇರಿ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಬೈಕ್ ನಲ್ಲಿದ್ದ ಮತ್ತೋಬ್ಬ ವಿದ್ಯಾರ್ಥಿ ಶಿವಾನಂದ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ. ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ವಿಡಿಯೋ ವೀಕ್ಷಿಸಲು ಈ ಲಿಂಕ್ ಒತ್ತಿ 👇

https://www.facebook.com/NewsNotOut2023/videos/746971337194551/?extid=CL-UNK-UNK-UNK-AN_GK0T-GK1C&mibextid=NnVzG8

See also  ಭೀಕರ ಅಪಘಾತ, ಕೆವಿಜಿ ನರ್ಸಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿ ದಾರುಣ ಸಾವು
  Ad Widget   Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget