ಕರಾವಳಿಕೊಡಗು

ಮಡಿಕೇರಿ: ಗುಂಡು ಹೊಡೆದು ವ್ಯಕ್ತಿ ಆತ್ಮಹತ್ಯೆ, ಕಾರಣ ನಿಗೂಢ

ನ್ಯೂಸ್ ನಾಟೌಟ್ : ವ್ಯಕ್ತಿಯೊಬ್ಬರು ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಡಿಕೇರಿ ಸಮೀಪದ ಕಾಟಕೇರಿ ಗ್ರಾಮದಲ್ಲಿ ನಡೆದಿದೆ. ಕಾಟಕೇರಿ ನಿವಾಸಿ ಕೆ.ಎ.ಉತ್ತಪ್ಪ (72) ಎಂಬವರು ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬುಧವಾರ ಬೆಳಗ್ಗಿನ ಜಾವ ಉತ್ತಪ್ಪ ಅವರು ಕಾಫಿ ತೋಟದಲ್ಲಿ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.ಘಟನೆಗೆ ಸಂಬಂಧಿಸಿ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

Related posts

ಜ್ಯುವೆಲ್ಲರಿಗೆ ನುಗ್ಗಿ ಸಿಬ್ಬಂದಿಯ ಕೊಲೆ ಕೇಸ್,ಒಂದು ತಿಂಗಳ ಬಳಿಕ ಆರೋಪಿ ಅಂದರ್

ಮಡಿಕೇರಿ: ಹಾರಂಗಿ ನಾಲೆಗೆ ಏಡಿ ಹಿಡಿಯಲೆಂದು ಹೋದ ಬಾಲಕ ನೀರು ಪಾಲು,ಕಣ್ಮರೆಯಾದವನಿಗಾಗಿ ತೀವ್ರ ಶೋಧ

ಉಡುಪಿಯ ತ್ರಾಸಿ ಬೀಚ್‌ ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿ ..! ಪ್ರವಾಸಿಗ ಪಾರು, ಬೋಟ್ ರೈಡರ್ ಕಣ್ಮರೆ..!