ಕರಾವಳಿಕೊಡಗು

ಮಡಿಕೇರಿ: ಬೆಳ್ಳಂ ಬೆಳಗ್ಗೆ ADC ಮನೆಗೆ ಲೋಕಾಯುಕ್ತ ಪೊಲೀಸರ ದಾಳಿ, ಮನೆಯಲ್ಲಿ ಪತ್ತೆಯಾಯ್ತು ಭಾರಿ ಪ್ರಮಾಣದ ನಗದು..?

172

ನ್ಯೂಸ್ ನಾಟೌಟ್: ಕೊಡಗು ADC ನಂಜುಂಡೇ ಗೌಡ ಮನೆಗೆ ಲೋಕಾಯುಕ್ತ ಪೊಲೀಸರು ಇಂದು (ಗುರುವಾರ) ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ್ದಾರೆ.


ಅಧಿಕಾರಿಗಳ ತಂಡ ಮುಂಜಾನೆ ೪ ಗಂಟೆಯಿಂದ ಮನೆಯಲ್ಲಿ ಶೋಧ ನಡೆಸಿದೆ. ಮನೆ ಮೇಲೆ ಇನ್ನಷ್ಟು ಹೊತ್ತು ಶೋಧ ಕಾರ್ಯ ಮುಂದುವರಿಯುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.ನಂಜುಂಡೇ ಗೌಡ ಮನೆ ಮಡಿಕೇರಿಯ ಕಾರ್ಯಪ್ಪ ವೃತ್ತದ ಬಳಿ ಇದೆ. ಲೋಕಾಯುಕ್ತ ಎಸ್‌ ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪವನ್ ಕುಮಾರ್‌, ಇನ್ಸ್ ಪೆಕ್ಟರ್ ಲೋಕೇಶ್ ಹಾಗೂ ಸಿಬ್ಬಂದಿ ಪರಿಶೀಲನೆ ಕೈಗೊಂಡಿದ್ದಾರೆ.

ಪಿರಿಯಾಪಟ್ಟಣದಲ್ಲಿ ಇರುವ ಮಾವನ ಮನೆ ಹಾಗೂ ಮೈಸೂರಿನಲ್ಲಿ ಇರುವ ಸಂಬಂಧಿಕರ ಮನೆ ಮೇಲೂ ಏಕಕಾಲದಲ್ಲಿ ಲೋಕಾಯುಕ್ತ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಮಡಿಕೇರಿ ಮನೆಯಲ್ಲಿ ನಗದು ಪತ್ತೆಯಾಗಿದೆ ಎನ್ನಲಾಗಿದೆ. ಬಂದಿದೆ.

See also  ಸುಬ್ರಹ್ಮಣ್ಯದಲ್ಲಿ ಸಿಡಿಲಿನ ಹೊಡೆತಕ್ಕೆ ನಿಂತ ನವ ವಿವಾಹಿತನ ಉಸಿರು, ಮಡಿಕೇರಿಯ ಕೂಲಿ ಕಾರ್ಮಿಕನಿಗೂ ಗಂಭೀರ ಗಾಯ
  Ad Widget   Ad Widget   Ad Widget   Ad Widget   Ad Widget   Ad Widget   Ad Widget