ಕರಾವಳಿಕೊಡಗು

ಮಡಿಕೇರಿ:ಇನ್ಮುಂದೆ ಕೊಡಗಿನ ಮುಗಿಲುಪೇಟೆಗೆ ಖಾಸಗಿ ಕಾರು, ಜೀಪು ನಿಷೇಧ – ಜಿಲ್ಲಾಧಿಕಾರಿ, ಎಸ್ಪಿ ಸೂಚನೆ

ನ್ಯೂಸ್ ನಾಟೌಟ್ : ಇನ್ಮುಂದೆ ಕೊಡಗಿನ ಮುಗಿಲುಪೇಟೆ (ಮಾಂದಲಪಟ್ಟಿ ) ಪ್ರವಾಸಿ ತಾಣಕ್ಕೆ ಹೋಗುವವರು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.ಹೌದು,ಪ್ರವಾಸಿಗರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರವಾಸಿ ತಾಣಕ್ಕೆ ಖಾಸಗಿ (ಬಿಳಿ ಬೋರ್ಡ್‌) ಕಾರು, ಜೀಪ್‌ಗಳಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಸೂಚನೆ ನೀಡಿದ್ದಾರೆ.

ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾಪ್ರವಾಸೋದ್ಯಮ ಸಮಿತಿ ಸಭೆಯಲ್ಲಿ ಈ ಬಗ್ಗೆ ಸೂಚನೆ ನೀಡಲಾಯಿತು. ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ಮಾತನಾಡುತ್ತಾ,”ಇತ್ತೀಚೆಗೆ ನಡೆದ ಕೆಲವು ಘಟನೆಗಳ ಹಿನ್ನೆಲೆ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಮಾಂದಲಪಟ್ಟಿಯಲ್ಲಿ ನಿಯಮದಂತೆ ಪ್ರವಾಸಿ ವಾಹನ (ಹಳದಿ ಬೋರ್ಡ್‌)ಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.ಪ್ರವಾಸೋದ್ಯಮಿಗಳು ಇಲಾಖೆಯೊಂದಿಗೆ ಸಹಕರಿಸಬೇಕು ಎನ್ನುತ್ತಾ,ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಜಿಲ್ಲೆಯ ಪ್ರವಾಸೋದ್ಯಮದ ಹಿತದೃಷ್ಟಿಯಿಂದಾಗಿ ಈ ನಿಯಮಗಳನ್ನು ರೂಪಿಸಲಾಗಿದೆ ಎಂದರು.

Related posts

ಹಿರಿಯ ಸಾಹಿತಿ ಬೈರಪ್ಪ, ಮಾಜಿ ಸಿಎಂ ಎಸ್‌. ಎಂ. ಕೃಷ್ಣ, ಸುಧಾಮೂರ್ತಿಗೆ ಪದ್ಮಪ್ರಶಸ್ತಿ

ಮಂಗಳೂರು: ಅಂಗನವಾಡಿ ಮಕ್ಕಳಿಗೆ ಸರ್ಕಾರ ಮತ್ತೆ ಪೂರೈಸಿತು ಕೊಳೆತ ಮೊಟ್ಟೆ..! ಮೊಟ್ಟೆ ಒಯ್ದಿದ್ದ ಗರ್ಭಿಣಿಯರು, ಬಾಣಂತಿಯರ ಕುಟುಂಬಸ್ಥರಿಂದ ಬೈಗುಳ ಸುರಿಮಳೆ, ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈಗ ಏನು ಹೇಳ್ತಾರೆ..?

ಬೆಳ್ತಂಗಡಿ: ರೆಖ್ಯಾ ಎಂಜಿರದಲ್ಲಿ ಹಣ್ಣು ತುಂಬಿದ ಲಾರಿ ಪಲ್ಟಿ! ಲಾರಿಯಲ್ಲಿದ್ದ ಇಬ್ಬರು ಪ್ರಾಣಪಾಯದಿಂದ ಪಾರು