ಕರಾವಳಿಕೊಡಗು

ಮಡಿಕೇರಿ: ಮಾರ್ಚ್ 4 ಮತ್ತು 5 ರಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಲಾಂಛನ ಬಿಡುಗಡೆ

ನ್ಯೂಸ್ ನಾಟೌಟ್ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಾಂಕ ನಿಗದಿಯಾಗಿದ್ದು, 16 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ಬಿಡುಗಡೆ ಮಾಡಿದರು.

ಕನ್ನಡ ಸಾಹಿತ್ಯ ಸಮ್ಮೇಳನವು ಮಾರ್ಚ್ 4 ಮತ್ತು 5 ರಂದು ಗೋಣಿಕೊಪ್ಪಲಿನ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದ್ದು, ಪೊನ್ನಂಪೇಟೆ ತಾಲೂಕಿನಲ್ಲಿ ಮೊದಲ ಬಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಊರ -ಪರವೂರಿನಿಂದ ಸಾಹಿತಿಗಳು ಆಗಮಿಸಲಿದ್ದು, ಮೆರವಣಿಗೆಯಲ್ಲಿ ಕನ್ನಡದ ಮಹತ್ವ ಮತ್ತು ಇತಿಹಾಸದ ಕುರಿತ ಭಿತ್ತಿಚಿತ್ರಗಳು ಮತ್ತು ವಿವಿಧ ಕಲಾಕೃತಿಗಳು ಪ್ರೇಕ್ಷಕರನ್ನು ರಂಜಿಸಲಿವೆ.


ಎಲ್ಲಾ ಸಂಘ ಸಂಸ್ಥೆಗಳು, ಕನ್ನಡ ಅಭಿಮಾನಿ ಬಳಗ, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕರು, ಅಧಕಾರಿಗಳು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದು, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂದೇಶ ನೀಡುವಂತಹ ಸಮ್ಮೇಳನವಾಗಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.
ಸಮ್ಮೇಳನದ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ .ಕೇಶವ ಕಾಮತ್, ಗೌರವ ಕಾರ್ಯದರ್ಶಿಗಳಾದ ಎಸ್.ಐ. ಮುನೀರ್ ಅಹ್ಮದ್ ,ರೇವತಿ ರಮೇಶ್ , ಸಮ್ಮೇಳನ ಹಣಕಾಸು ಸಮಿತಿ ಸಂಚಾಲಕ ಬಿ.ಎನ್ ಪ್ರಕಾಶ್ ಉಪಸ್ಥಿತರಿದ್ದರು.

Related posts

ಯುವಕರಿಗೆ ಚಕ್ರವರ್ತಿ ಸೂಲಿಬೆಲೆ ಅಕ್ರಮ ಶಸ್ತ್ರಾಸ್ತ್ರ ತರಬೇತಿ?

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಯಾತ್ರೆಗೆ ಅನುಮತಿ ಕೋರಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ ಬಾಲಕಿ, ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಹೇಳಿದ್ದೇನು..?

ಬುಡ ಸಹಿತ ಧರೆಗುರುಳಿ ಬಿದ್ದ ಶ್ರೀ ಕಾಂತಬಾರೆ- ಬೂದ ಬಾರೆ ಜನ್ಮಕ್ಷೇತ್ರದ ತಾಕೊಡೆ ಮರ..!, 1,000 ವರ್ಷಗಳ ಇತಿಹಾಸವಿರುವ ಮರ ಇನ್ನು ನೆನಪು ಮಾತ್ರ