ಕೊಡಗುಕ್ರೈಂವೈರಲ್ ನ್ಯೂಸ್

ಮಡಿಕೇರಿ:ಸಾಜಿದ್ ಗೆ ಚಾಕುವಿನಿಂದ ಇರಿದ ಶ್ರೀನಿಧಿ..! ಚಿಕಿತ್ಸೆ ಫಲಿಸದೆ ಯುವಕ ಮೃತ್ಯು

255

ನ್ಯೂಸ್‌ ನಾಟೌಟ್‌ : ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಸೋಮವಾರ(ಜ.6) ನಡೆದಿದೆ.

ಮೃತ ಯುವಕನನ್ನು ಮಡಿಕೇರಿ ಗಣಪತಿ ಬೀದಿ‌ ನಿವಾಸಿ ಸಾಜಿದ್ (22) ಎಂದು ಗುರುತಿಸಲಾಗಿದೆ. ಮೈಸೂರು ರಸ್ತೆಯಲ್ಲಿರುವ ಸಾಜಿದ್, ಶ್ರೀನಿಧಿ ಎಂಬವರ ಸರ್ವಿಸ್ ಸ್ಟೇಷನ್​ಗೆ ಬೈಕ್ ಸರ್ವಿಸ್​ ಮಾಡಲೆಂದು ಸಾಜೀದ್ ಆಗಮಿಸಿದ್ದನು. ಈ ವೇಳೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ ಎಂದು ವರದಿ ತಿಳಿಸಿದೆ.

ಆರೋಪಿ ಶ್ರೀನಿಧಿ ಚೂರಿಯಿಂದ ಇರಿದಿದ್ದ ಎನ್ನಲಾಗಿದೆ. ಗಂಭೀರ ಗಾಯಗೊಂಡ ಸಾಜಿದ್ ನನ್ನು ಹೆಚ್ಚಿನ ಚಿಕಿತ್ಸೆಗೆ‌ ಮೈಸೂರಿಗೆ ರವಾನಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕುಶಾಲನಗರ ಟೌನ್ ಠಾಣಾ ಪೊಲೀಸರು ಆರೋಪಿ ಶ್ರೀನಿಧಿಯನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.

See also  ಲವ್ವರ್ ಜೊತೆ ಸಿಕ್ಕಿ ಬಿದ್ದ ಪತ್ನಿಯನ್ನು ಜೀವಂತ ಸುಟ್ಟನಾ ಪತಿ..! ಲವ್ವರ್ ಬೆಂಕಿಯಿಂದ ಪಾರಾದದ್ದೇಗೆ..? ಇಲ್ಲಿದೆ ವಿಚಿತ್ರ ಲವ್ ಸ್ಟೋರಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget