ಕೊಡಗು

ಮಡಿಕೇರಿ: ಆಸ್ಪತ್ರೆಗೆ ಬಂದಿದ್ದ ಮಹಿಳೆಯ ಚಿನ್ನಾಭರಣ ಕಳವು

ನ್ಯೂಸ್ ನಾಟೌಟ್: ಕೊಡಗಿನ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಎಕ್ಸ್‌ ರೇ ಮಾಡಿಸಲೆಂದು ಬಂದಿದ್ದ ಮಹಿಳೆಯೊಬ್ಬರ ಚಿನ್ನಾಭರಣ ಕಳವುಗೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಎಕ್ಸ್ ರೇ ನಡೆಸುವುದಕ್ಕೂ ಮೊದಲು ಆಸ್ಪತ್ರೆ ಸಿಬ್ಬಂದಿ ಚಿನ್ನಾಭರಣವನ್ನು ತೆಗೆದಿಡುವಂತೆ ಸೂಚಿಸಿದ್ದಾರೆ. ಅಂತೆಯೇ ಮಹಿಳೆ ಚಿನ್ನಾಭರಣ ತೆಗೆದು ಬ್ಯಾಗ್ ನೊಳಗೆ ಇಟ್ಟಿದ್ದರು. ಆದರೆ ಎಕ್ಸ್‌ ರೇ ಮುಗಿಸಿ ವಾಪಸ್ ಬಂದು ನೋಡಿದಾಗ ಬ್ಯಾಗ್ ನಲ್ಲಿಟ್ಟಿದ್ದ ಸುಮಾರು ಒಂದೂವರೆ ಲಕ್ಷ ಮೌಲ್ಯದ ಚಿನ್ನದ ಸರ ನಾಪತ್ತೆಯಾಗಿರುವುದು ಕಂಡು ಬಂದಿದೆ. ಹೀಗಾಗಿ ಮಹಿಳೆ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಕೊಡಗು ದುರಂತದಲ್ಲಿ ಹೆಂಡತಿ, ಮಕ್ಕಳನ್ನು ಕಳಕೊಂಡ ವ್ಯಕ್ತಿ ಪರಿಹಾರದ ಹಣದಲ್ಲಿ ಬಡವರಿಗೆ ಮನೆ ಕಟ್ಟಿ ಕೊಟ್ರು.! ತನ್ನನ್ನು ಅಗಲಿದ ಹೆಂಡತಿ, ಮಕ್ಕಳ ನೆನಪಿನಲ್ಲಿ ಎರಡು ಕುಟುಂಬದ ಬಾಳಿಗೆ ಬೆಳಕಾದ್ರು..!

ಮಡಿಕೇರಿ:ಠಾಣೆಗೆ ನುಗ್ಗುವುದಾಗಿ ಪೊಲೀಸರಿಗೆ ಎಚ್ಚರಿಕೆ ಕೊಟ್ಟಿದ್ದೇಕೆ ಸಂಸದ ಪ್ರತಾಪ್​ ಸಿಂಹ?ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಕಿರುಕುಳ ನೀಡಿದ್ದು ನಿಜವೇ?ಏನಿದು ಘಟನೆ?

ಕೊಡಗು ದುರಂತದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ಹಂಚಿಕೆ