ಕರಾವಳಿಕೊಡಗುಕ್ರೈಂವಿಡಿಯೋವೈರಲ್ ನ್ಯೂಸ್

ಮಡಿಕೇರಿ: ಕುಸಿಯುವ ಭೀತಿಯಲ್ಲಿ ಗ್ಲಾಸ್ ಬ್ರಿಡ್ಜ್ ..!, ವಿರೋಧಿಗಳ ಕುತಂತ್ರವೇ..? ಹೊಸ ಗ್ಲಾಸ್ ಬ್ರಿಡ್ಜ್ ಗೆ ಏನಿದು ಕಂಟಕ..? ಇಲ್ಲಿದೆ ಡಿಟೇಲ್ಸ್

ನ್ಯೂಸ್ ನಾಟೌಟ್: ದಕ್ಷಿಣದ ಕಾಶ್ಮೀರ ಕೊಡಗಿನಲ್ಲಿ ಮಳೆ ಬಂತೆಂದರೆ ಪ್ರಕೃತಿ ಸೊಬಗು ಮೈತುಂಬಿಕೊಳ್ಳುತ್ತೆ, ಪ್ರವಾಸಿ ತಾಣಗಳು ಸೌಂದರ್ಯ ಪ್ರಿಯರನ್ನು ಕೈ ಬೀಸಿ ಕರೆಯುತ್ತೆ. ಇಂತಹ ಹೊತ್ತಿನಲ್ಲಿ ಕೊಡಗಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಹಾಗೆ ಬರುತ್ತಿರುವ ಪ್ರವಾಸಿಗರಿಗೆ ಈಗ ಆತಂಕವೂ ಎದುರಾಗಿದೆ.

ನಿರಂತರ ಮಳೆಯ ಬೆನ್ನಲ್ಲೇ ಅಭಿಫಾಲ್ಸ್ ಗೆ ಹೋಗುವ ದಾರಿ ಬಳಿ ಇರುವ ಗ್ಲಾಸ್ ಬ್ರಿಡ್ಜ್ ಕುಸಿಯುವ ಭೀತಿಗೆ ಒಳಗಾಗಿದೆ ಅನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ವಿಡಿಯೋ ವೈರಲ್ ಆಗುತ್ತಿರುವ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ತಾತ್ಕಾಲಿಕವಾಗಿ ವೀಕ್ಷಣೆಗೆ ನಿರ್ಬಂಧವನ್ನು ಹಾಕಲಾಗಿದೆ. ಗ್ಲಾಸ್ ಬ್ರಿಡ್ಜ್ ಸಮೀಪದ ಪಿಲ್ಲರ್ ಬಳಿ ಮಣ್ಣು ಕುಸಿಯುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಭೂಕುಸಿತ ಉಂಟಾಗಿ ಬ್ರಿಡ್ಜ್ ಕುಸಿಯಬಹುದು ಎಂದು ಹೇಳಲಾಗುತ್ತಿದೆ.

ಈ ನಡುವೆ ನ್ಯೂಸ್ ನಾಟೌಟ್ ಜೊತೆಗೆ ಮಾತನಾಡಿರುವ ಗ್ಲಾಸ್ ಬ್ರಿಡ್ಜ್ ಆಡಳಿತ ಮಂಡಳಿಯ ಸದಸ್ಯರಾಗಿರುವ ದೇವಯ್ಯ ಅವರು, ‘ಇದೆಲ್ಲ ವಿರೋಧಿಗಳ ಕುತಂತ್ರ, ನಮ್ಮ ಬ್ರಿಡ್ಜ್ ಬಗ್ಗೆ ಹೊಟ್ಟೆಕಿಚ್ಚು ತಡೆಯಲಾರದೆ ಅಪಪ್ರಚಾರ ಮಾಡುತ್ತಿದ್ದಾರೆ. ಹಾಕಿದ ಮಣ್ಣು ಮಳೆಯ ಹಿನ್ನೆಲೆಯಲ್ಲಿ ತೊಳೆದು ಹೋಗಿದೆ ಅಷ್ಟೇ. ಅಷ್ಟಕ್ಕೆ ಕುಸಿಯುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಇಲ್ಲಿ ನಾವು ಕೋಟ್ಯಂತರ ರೂ. ಖರ್ಚು ಮಾಡಿದ್ದೇವೆ. ಪ್ರವಾಸಿಗರ ಸುರಕ್ಷತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿಯೇ ನಿರ್ಮಾಣ ಮಾಡಿದ್ದೇವೆ. ತಾತ್ಕಲಿಕವಾಗಿ ಒಂದು ವಾರ ಪ್ರವಾಸಿಗರಿಗೆ ಪ್ರವೇಶ ಇರುವುದಿಲ್ಲ. ವಾರದ ಬಳಿಕ ಎಲ್ಲವೂ ಸರಿ ಆಗಲಿದೆ. ಮತ್ತೆ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿದೆ’ ಎಂದು ತಿಳಿಸಿದರು.

Click 👇

https://newsnotout.com/2024/06/drupadi-murmu-kannada-news-healthcare-from-govt-announced-by-president

Related posts

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ಹಿನ್ನೆಲೆ, ಚಕ್ರವರ್ತಿ ಸೂಲಿಬೆಲೆ ವಿರುದ್ಧ ಜಾರಿಯಾಗಿದ್ದ ಸಮನ್ಸ್‌ಗೆ ಹೈಕೋರ್ಟ್‌ ತಡೆ

ಸ್ವಚ್ಛ ಭಾರತದ ಬಗ್ಗೆ ಭಾಷಣ ಸ್ಪರ್ಧೆಯಲ್ಲಿ ರಾಷ್ಟ್ರಪತಿಗಳ ಮುಂದೆ ಭಾಷಣ ,ಪ್ರಥಮ ಸ್ಥಾನ ಪಡೆದು ವೈರಲ್ ಆದ ಉಡುಪಿಯ ಬಾಲಕಿ!

ಎಡಮಂಗಲ: ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ..! ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ