ಕೊಡಗುಕ್ರೈಂ

ಮಡಿಕೇರಿ: ವೈನ್ ಶಾಪ್ ಎದುರಿನಲ್ಲಿ ಮಧ್ಯರಾತ್ರಿ ಆಕಸ್ಮಿಕವಾಗಿ ಬಂದೂಕಿನಿಂದ ಸಿಡಿದ ಗುಂಡು..! ವೈನ್ ಶಾಪ್ ಮಾಲಕ ಸಾವು..!

ನ್ಯೂಸ್ ನಾಟೌಟ್: ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಮಡಿಕೇರಿಯ ಚೇರಂಬಾಣೆ ಗ್ರಾಮದಲ್ಲಿ ಜ.15ರ ತಡರಾತ್ರಿ ನಡೆದಿದೆ.

ಸಾವಿಗೀಡಾದ ವ್ಯಕ್ತಿಯನ್ನು ಪೊನ್ನಚೆಟ್ಟಿರ ಮಿತ್ರ ಚಂಗಪ್ಪ (49) ಎಂದು ಗುರುತಿಸಲಾಗಿದೆ. ಒಂಟಿ ನಳಿಗೆ ಬಂದೂಕಿನಿಂದ ಗುಂಡು ಹಾರಿ ಈ ದುರ್ಘಟನೆ ಸಂಭವಿಸಿದೆ. ಬಂದೂಕು ಕೆಳಕ್ಕೆ ಬಿದ್ದು ಗುಂಡು ಹಾರಿರುವ ಶಂಕೆ ವ್ಯಕ್ತವಾಗಿದೆ.

ಚಂಗಪ್ಪ, ಚೇರಂಬಾಣೆ ಪಟ್ಟಣದಲ್ಲಿ ವೈನ್ ಶಾಪ್ ಹೊಂದಿದ್ದರು. ವೈನ್ ಶಾಪ್ ಎದುರಿನಲ್ಲೇ ಮಧ್ಯರಾತ್ರಿ 12 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ.
ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಸುಳ್ಯ-ಆಲೆಟ್ಟಿ: ಮೂರು ದಿನವಾದರೂ ಸಿಕ್ಕಿಲ್ಲ ಪ್ರವಾಹದಲ್ಲಿ ಕೊಚ್ಚಿ ಹೋದ ಕಾರ್ಮಿಕ, ರಭಸದಿಂದ ಹರಿಯುವ ನೀರನ್ನು ಲೆಕ್ಕಿಸದೆ ಕಾರ್ಯಾಚರಣೆ

ಪ್ರೇಮಿಗಳೆಂದು ಭಾವಿಸಿ ಸಹೋದರ ಮತ್ತು ಸಹೋದರಿಯನ್ನು ಥಳಿಸಿದ ಮುಸ್ಲಿಂ ಯುವಕರು..! ದಾರಿ ತಪ್ಪಿದ ನೈತಿಕ ಪೊಲೀಸ್ ಗಿರಿ, ಕುಟುಂಬಸ್ಥರು ಕಂಗಾಲು..!

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ, ಪ್ರಮುಖ ಆರೋಪಿ ಬಂಧನ..!