ಕರಾವಳಿಸುಳ್ಯ

ಮಡಿಕೇರಿ : ಫೆ. 25 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

419

ನ್ಯೂಸ್ ನಾಟೌಟ್ : ಕೊಡಗು ಪತ್ರಕರ್ತ ಸಂಘ , ಲಯನ್ಸ್ ಕ್ಲಬ್ , ಮೈಸೂರಿನ ಸುಯೋಗ್ ಆಸ್ಷತ್ರೆ ಸಹಯೋಗದಲ್ಲಿ ಫೆಬ್ರವರಿ 25 ರಂದು ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮಡಿಕೇರಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿರುವ ಶಿಬಿರದಲ್ಲಿ ಮೈಸೂರು ಸುಯೋಗ್ ಆಸ್ಪತ್ರೆಯ ಹೃದಯ ತಜ್ಞರು, ಸ್ತ್ರೀರೋಗ ತಜ್ಞರು, ಫಿಸಿಷಿಯನ್ ವೈದ್ಯರುಗಳು ತಪಾಸಣೆ ನಡೆಸಲಿದ್ದಾರೆ. ಇಕೊ ಪರೀಕ್ಷೆ, ಇಸಿಜಿ, ಮಧುಮೇಹ ಹಾಗೂ ರಕ್ತದೊತ್ತಡ ಪರೀಕ್ಷೆಗಳು ನಡೆಯಲಿವೆ. ಕಾರ್ಯಕ್ರಮವನ್ನು ಬೆಳಿಗ್ಗೆ 10.30 ಗಂಟೆಗೆ ಕೆಪಿಸಿಸಿ ಪ್ರಮುಖರು, ಹೈಕೋರ್ಟಿನ ನಿಕಟಪೂರ್ವ ಅಭಿಯೋಜಕ ಹೆಚ್.ಎಸ್.ಚಂದ್ರಮೌಳಿ‌ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಆರ್.ಹರೀಶ್ ಕುಮಾರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಮಾಜಿ ಸದಸ್ಯ ಮಂಡೇಪಂಡ , ಸುನಿಲ್ ಸುಬ್ರಮಣಿ, ಕೊಡಗು ಪತ್ರಕರ್ತಸಂಘದ ಅಧ್ಯಕ್ಷ ಎಸ್ .ಎ ಮುರಳೀಧರ, ಉಪಾಧ್ಯಕ್ಷ ಜಿ.ವಿ ರವಿಕುಮಾರ್ ,ಲಯನ್ಸ್ ಕ್ಲಬ್ ಅಧ್ಯಕ್ಷೆ ಕನ್ನಂಡ ಕವಿತ , ಅನೇಕ ಗಣ್ಯರು ಉಪಸ್ಥಿತರಿರಲಿದ್ದಾರೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಶಿಬಿರ ಪ್ರಯೋಜನವನ್ನು ಪಡೆಯಬೇಕಾಗಿ ಕೊಡಗು ಪತ್ರಕರ್ತ ಸಂಘದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

See also  ಗೋಳಿತೊಟ್ಟು: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ, ಚಾಲಕ ಪ್ರಾಣಾಪಾಯದಿಂದ ಪಾರು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget