Latestಕೊಡಗುಕ್ರೈಂ

ಮಡಿಕೇರಿ: ಕಾಡಾನೆ ದಾಳಿಗೆ ಎಸ್ಟೇಟ್ ಕಾರ್ಮಿಕ ಸಾವು..! ದೇವಾಲಯದ ಆವರಣದ ಬಳಿ ಘಟನೆ..!

688

ನ್ಯೂಸ್ ನಾಟೌಟ್: ಮಡಿಕೇರಿಯಲ್ಲಿ ಕಾಡಾನೆ ದಾಳಿಗೆ ಎಸ್ಟೇಟ್ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಇಂದು(ಮೇ.21) ವರದಿಯಾಗಿದೆ.

ಮಡಿಕೇರಿಯ ದಕ್ಷಿಣ ಕೊಡಗಿನ ದೇವರಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಎಸ್ಟೇಟ್ ಕಾರ್ಮಿಕ ಅಣ್ಣಯ್ಯ (41) ಎಂಬಾತ ಕಾಡಾನೆ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಗ್ರಾಮದಲ್ಲಿ’ಬೇಡು ನಮ್ಮೆ’ ಎಂಬ ವಿಶಿಷ್ಟ ಹಬ್ಬವನ್ನು ಆಚರಿಸಲು ಸಿದ್ಧತೆ ನಡೆಸುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ ಎನ್ನಲಾಗಿದೆ. ಗ್ರಾಮಸ್ಥರು ಅಯ್ಯಪ್ಪ ದೇವಸ್ಥಾನದ ಬಳಿ ಉತ್ಸವವನ್ನು ಪ್ರಾರಂಭಿಸಲು ಸೇರಿದ್ದರು. ಈ ವೇಳೆ ದೇವಾಲಯದ ಆವರಣದ ಬಳಿ ಈ ದಾಳಿ ನಡೆದಿದೆ.

ಎಂದಿನಂತೆ ಎಸ್ಟೇಟ್ ಕಾರ್ಮಿಕ ಅಣ್ಣಯ್ಯ ಖಾಸಗಿ ಎಸ್ಟೇಟ್‌ ನಲ್ಲಿ ಕೆಲಸ ಮಾಡಲು ಮನೆಯಿಂದ ಹೊರಟಿದ್ದರು. ದಾರಿಯಲ್ಲಿ, ಕಾಡಾನೆ ಜೊತೆ ಮುಖಾಮುಖಿಯಾಗಿದ್ದಾರೆ. ಈ ವೇಳೆ ಅಣ್ಣಯ ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಆನೆ ಅಣ್ಣಯ್ಯ ಅವರನ್ನು ಅಟ್ಟಾಡಿಸಿದೆ. ಕಾಡಿನ ಅಂಚಿನ ಕಿರಿದಾದ ಹಾದಿಯಲ್ಲಿ ದಾರಿ ಕಾಣದೆ ಅಣ್ಣಯ್ಯ ಆನೆ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಆನೆ ಅವರನ್ನು ತುಳಿದು ಕೊಂದು ಹಾಕಿದೆ.

ಈ ವೇಳೆ ಅಣ್ಣಯ್ಯ ಅವರ ಆಕ್ರಂದನ ಕೇಳಿ ಅಯ್ಯಪ್ಪ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದ ಗ್ರಾಮಸ್ಥರು ಓಡಿ ಬಂದಿದ್ದು, ಆನೆ ದಾಳಿ ವಿಚಾರ ಬಯಲಾಗಿದೆ. ಕೂಡಲೇ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಅರಣ್ಯಾಧಿಕಾರಿಗಳನ್ನು ನಿಯೋಜಿಸಲಾಯಿತು. ಕಾಡಾನೆ ಕಾಡಿನ ಅಂಚುಗಳಿಗೆ ಹಿಂತಿರುಗದಂತೆ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ.

20 ರೂ. ಇದ್ದ ನೀರಿನ ಬಾಟಲ್ ಬೆಲೆ ಕೇದಾರನಾಥ ಶಿಖರದಲ್ಲಿ 100 ರೂಪಾಯಿ..! ಇಲ್ಲಿದೆ ಮನಕಲಕುವ ವಿಡಿಯೋ

See also  ತೇಜಸ್ವಿ ಯಾದವ್ ಬದಲು ಹೆಸರು ತಪ್ಪಿ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ..! ಮುಜುಗರಕ್ಕೊಳಗಾದ ಕಂಗನಾ ರಣಾವತ್..! ಇಲ್ಲಿದೆ ವೈರಲ್ ವಿಡಿಯೋ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget