ಕೊಡಗು

ಮಡಿಕೇರಿ: ನಿತ್ರಾಣಗೊಂಡು ಹೆಣ್ಣಾನೆ ಸಾವು

722

ಮಡಿಕೇರಿ: ವಯಸ್ಸಾದ ಕಾಡಾನೆಯೊಂದು ಸ್ವಾಭಾವಿಕವಾಗಿ ಸಾವಿಗೀಡಾಗಿರುವ ಘಟನೆ ಶ್ರೀಮಂಗಲದ ಬಿರುನಾಣಿ ಗ್ರಾ.ಪಂ ವ್ಯಾಪ್ತಿಯ ಪರಕಟಕೇರಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ತೋಟದ ನಡುವೆ ಇರುವ ಗ್ರಾಮದ ಕಚ್ಚಾ ರಸ್ತೆಯಲ್ಲಿ ಹೆಣ್ಣು ಕಾಡಾನೆ ಸಾವಿಗೀಡಾಗಿದೆ. ಬ್ರಹ್ಮಗಿರಿ ಅಭಯಾರಣ್ಯ ವ್ಯಾಪ್ತಿಯ ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣವರ್ ಸ್ಥಳಕ್ಕೆ ಭೇಟಿ ನೀಡಿದರು. ಅಭಯಾರಣ್ಯದಿಂದ ಪರಕಟಕೇರಿ ಗ್ರಾಮಕ್ಕೆ ಬಂದಿದ್ದ ಕಾಡಾನೆ ನಿತ್ರಾಣಗೊಂಡು ಸಾವಿಗೀಡಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

See also  ದಕ್ಷಿಣ ಕನ್ನಡದಿಂದ ಲೋಕಸಭೆ ಚುನಾವಣೆಗೆ ಪ್ರತಾಪ್ ಸಿಂಹ ಸ್ಪರ್ಧೆ..? ಅಚ್ಚರಿಯ ಲಿಸ್ಟ್ ಪ್ರಕಟಿಸುವುದೇ ಬಿಜೆಪಿ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget