ಕೊಡಗು

ಮಡಿಕೇರಿ: ಕ್ವಾರೆಂಟೀನ್ ಕ್ಯಾಂಪ್‌ ನಿಂದ ಕೋವಿಡ್ ಸೋಂಕಿತರು ಪರಾರಿ

ಮಡಿಕೇರಿ: ಕರೋನಾ ಸೋಂಕಿತರು ರಾತ್ರಿಯ ವೇಳೆ ಸಮಯ ಸಾಧಿಸಿ ಎಸ್ಕೇಪ್ ಆಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಿಂದ ವರದಿಯಾಗಿದೆ.

ಕರೋನಾ ತಗುಲಿದ್ದ ಹೊರ ರಾಜ್ಯದ ಕಟ್ಟಡ ಕಾರ್ಮಿಕರು ಸಹಿತ ಏಳು ಮಂದಿಯನ್ನು ಕ್ವಾರೆಂಟೀನ್ ಗೆ ಒಳಪಡಿಸಲಾಗಿತ್ತು. ನಗರದ ಗಾಂಧಿ ಮಂಟಪದ ನಿರ್ಮಾಣ ಹಂತದಲ್ಲಿರುವ ಕಟ್ಟದಲ್ಲಿ ಕ್ವಾರೆಂಟೀನ್ ಗೆ ಅವಕಾಶ ಕಲ್ಪಿಸಲಾಗಿತ್ತು. ಇವರಲ್ಲಿ ಸುಶೀಲ್, ಶಾಂಬು ಉರವನ್ ಫೆಂಟು ಪರಾರಿಯಾದ ಜಾರ್ಖಂಡ್ ಮೂಲದ ಕಾರ್ಮಿಕರಾಗಿದ್ದಾರೆ. ಒಟ್ಟು ಏಳು ಮಂದಿ ಕ್ಯಾಂಪ್ ನಿಂದ ಎಸ್ಕೇಪ್ ಆಗಿದ್ದು ಇವರ ಹುಡುಕಾಟ ನಡೆಸಲಾಗುತ್ತಿದೆ. ನಾಪತ್ತೆಯಾಗಿರುವವರ ಕುರಿತು ಮಡಿಕೇರಿ ತಾಲೂಕು ಪೊಲೀಸರಿಗೆ ವೈದ್ಯಾಧಿಕಾರಿಗಳು ದೂರು ನೀಡಿದ್ದಾರೆ.

Related posts

ಮಡಿಕೇರಿ: ಗೊಬ್ಬರ ಸಾಗಿಸುತ್ತಿದ್ದ ಲಾರಿ ಪಲ್ಟಿ !

Cauvery Water Sharing: ತಮಿಳುನಾಡಿಗೆ ನೀರು ಬಿಟ್ಟಿದ್ದಕ್ಕೆ ಭಾರೀ ಆಕ್ರೋಶ;ಹರಿಯುತ್ತಿರುವ ನದಿಗಿಳಿದು ಅರೆಬಟ್ಟೆಯಲ್ಲೇ ಹೋರಾಟ,ರೈತರು ಹೇಳಿದ್ದೇನು?

ಸಮಂತಾಗೆ ಸಿಕ್ಕಿದ ಅವಕಾಶ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಪಾಲಾಯ್ತು,ಯಾವುದು ಆ ಚಿತ್ರ?