ಕೊಡಗು

ಮಡಿಕೇರಿ: ರಿವರ್ಸ್‌ ತೆಗೆಯುವಾಗ ಏಕಾಏಕಿ ಹಿಂಬದಿಗೆ ಚಲಿಸಿದ ಕಾರು..! ಮುಂದೇನಾಯ್ತು..? ವಿಡಿಯೋ ವೀಕ್ಷಿಸಿ

ನ್ಯೂಸ್‌ ನಾಟೌಟ್‌: ಹೋಟೆಲ್‌ ಮುಂಭಾಗದಲ್ಲಿ ಕಾರೊಂದು ರಿವರ್ಸ್‌ ತೆಗೆಯುವ ಸಂದರ್ಭ ಏಕಾಏಕಿ ಹಿಂಬದಿಗೆ ಚಲಿಸಿ ರಸ್ತೆಯಲ್ಲಿ ಹೋಗುತ್ತಿದ್ದ ರಿಕ್ಷಕ್ಕೆ ಡಿಕ್ಕಿಯಾಗಿ ನಂತರ ಎರಡು ಬಾರಿ ಯದ್ವ ತದ್ವ ಚಾಲನೆಗೊಂಡು ತಡೆಗೋಡೆಗೆ ಡಿಕ್ಕಿಯಾಗಿ ಮಗುಚಿಬಿದ್ದ ಘಟನೆ ಮಡಿಕೇರಿಯಲ್ಲಿ ಸಂಭವಿಸಿದೆ.

ಮಡಿಕೇರಿ ಮಂಗಳೂರು ರಸ್ತೆಯ ಗ್ರೀನ್ ಲ್ಯಾಂಡ್ ಹೋಟೆಲ್ ಸಮೀಪ ಕಾರೊಂದು ಒಂದು ರಿವರ್ಸ್ ತೆಗೆಯುವ ಸಂದರ್ಭ ಕಾರಿನ ಎಕ್ಸಲೆಟರ್ ಜಾಮ್ ಆಗಿ ಹಿಂಬದಿಗೆ ಏಕಾ ಏಕಿ ಚಲಿಸಿ ರಿಕ್ಷಕ್ಕೆ ಡಿಕ್ಕಿಯಾಗಿ ತಡೆ ಗೋಡೆಗೆ ಡಿಕ್ಕಿಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಘಟನೆಯಿಂದ ರಿಕ್ಷಾ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಕಾರಿನಲ್ಲಿದ್ದವರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಕೆಎ 12 ಎಂ ಎ 71 23 ಸಂಖ್ಯೆಯ ಹೋಂಡಾ ಡಬ್ಲ್ಯೂ ಆರ್ ವಿ ಬಿಳಿ ಬಣ್ಣದ ಕಾರು ವೈದ್ಯರೊಬ್ಬರಿಗೆ ಸೇರಿದ್ದು ಎಂದು ತಿಳಿದುಬಂದಿದೆ.

Related posts

ಮದೆನಾಡು: ಪ್ರಾಕೃತಿಕ ವಿಕೋಪ ಎದುರಿಸಲು ಪೊಲೀಸರಿಂದ ತಾಲೀಮು..! ಬೆಟ್ಟ-ಗುಡ್ಡ ಹತ್ತಿ ಇಳಿದು ಭರ್ಜರಿ ಸಾಹಸ

ಮಡಿಕೇರಿ:ಟ್ರಾನ್ಸ್‌ಫಾರ್ಮರ್‌ಗೆ ಕಾರು ಡಿಕ್ಕಿಯಾಗಿ ಪಲ್ಟಿ..!ಚಾಲಕನಿಗೇನಾಯ್ತು?

ಮಡಿಕೇರಿ:ಬೈಕ್ ಅಪಘಾತ,ಯುವಕ ದಾರುಣ ಸಾವು