ಕೊಡಗು

ಮಡಿಕೇರಿ: ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಧೃತಿ ಚಾಂಪಿಯನ್‌

ನ್ಯೂಸ್ ನಾಟೌಟ್: ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ 8ನೇ ಬ್ರೈನೋ ಬ್ರೈನ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಮಡಿಕೇರಿಯ ಧೃತಿ ಜೆ. ಪೂಜಾರಿ ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ದುಬೈನ ಶೇಖ್ ರಶೀದ್‌ ಸಭಾಂಗಣದಲ್ಲಿ ನಡೆದ ಅಬಕಾಸ್‌ ಕೂಟದಲ್ಲಿ ಕರ್ನಾಟಕ ರಾಜ್ಯದಿಂದ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುಮಾರು 16 ದೇಶಗಳ 2 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಧೃತಿ ಜೆ. ಪೂಜಾರಿ ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅಬಕಾಸ್‌ ಅಂತಾರಾಷ್ಟ್ರೀಯ ಮುಖ್ಯಸ್ಥ ಆನಂದ್‌ ಸುಬ್ರಹ್ಮಣ್ಯಂ ಹಾಗೂ ಅಬಕಾಸ್ ನ ತಾಂತ್ರಿಕ ಮುಖ್ಯಸ್ಥ ಅಗುಲ್ ಸುಬ್ರಹ್ಮಣ್ಯ ಧೃತಿ ಪ್ರಶಸ್ತಿ ಪಡೆದರು. ಇದೇ ಮೊದಲ ಬಾರಿಗೆ ಮಡಿಕೇರಿಯ ಬ್ರೆನೋ ಬ್ರೆನ್ ಸಂಸ್ಥೆಯಿಂದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದು ವಿಶೇಷವಾಗಿದೆ. ಧೃತಿ ಮಡಿಕೇರಿಯ ಸಂತ ಜೋಸೆಫ್ ಶಾಲೆಯ 2 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಗೂ ಕೂಡ ಹೆಮ್ಮೆಯ ವಿಚಾರ.

ಉಡುಪಿ ಗಾರ್ಡನ್ ರೆಸ್ಟೋರೆಂಟ್ ಮಾಲೀಕರಾದ ಜಯಂತ್‌ ಪೂಜಾರಿ ಹಾಗೂ ಚೇತನಾ ದಂಪತಿ ಪುತ್ರಿಯಾಗಿರುವ ಧೃತಿ ಮಡಿಕೇರಿಯ ಮಾಪಂಗಡ ಕವಿತಾ ಕರುಂಬಯ್ಯ ಅವರ ಬ್ರಿನೋ ಬೈನ್ ಅಬಕಾಸ್‌ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಳು.

Related posts

ಮಡಿಕೇರಿ: ಪ್ರಾಣ ಪಣಕ್ಕಿಟ್ಟು ಜೀವ ರಕ್ಷಿಸಿದ ಬಾಲಕ-ಬಾಲಕಿ

ಕಾರ್ಕಳ:ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ರವರ ಬಿರುಸಿನ ಮತಪ್ರಚಾರ,ಸಾಥ್ ನೀಡಿದ ಕಾರ್ಯಕರ್ತರು

ಕೇರಳ :ಪ್ರಸಿದ್ಧ ದೇವಸ್ಥಾನವೊಂದಕ್ಕೆ ನಟಿ ಪ್ರಿಯಾಮಣಿಯಿಂದ ಯಾಂತ್ರಿಕ ಆನೆ ಉಡುಗೊರೆ..!ಹೇಗಿದೆ ಗೊತ್ತಾ ಈ ಆಕರ್ಷಕ ಆನೆ?