ನ್ಯೂಸ್ ನಾಟೌಟ್: ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಅಸ್ಸಾಂ ಮೂಲದ ವ್ಯಕ್ತಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಗೂಸಾ ನೀಡಿದ ಘಟನೆ ಕೊಡಗು ಜಿಲ್ಲೆಯ ಕಾರೇಕೊಪ್ಪ ಗ್ರಾಮದಿಂದ ವರದಿಯಾಗಿದೆ. ಆತನನ್ನು ಹಿಡಿದು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಸ್ಸಾಂ ರಾಜ್ಯದ ಗೋಲ್‌ಪರಾ ಜಿಲ್ಲೆಯ ಕಿಸ್ನಾಹ್ ಗ್ರಾಮದ ಸೈದುಲ್ಲ(28 ವರ್ಷ) ಆರೋಪಿ. ಈತ ಸದ್ಯ ಸೋಮವಾರಪೇಟೆ ಪೊಲೀಸರು ಅತಿಥಿಯಾಗಿದ್ದಾನೆ.
ಏನಿದು ಘಟನೆ..?
ಮಹಿಳೆಯೋರ್ವರು ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕೆ ತೆರಳಲು ಕಾರೇಕೊಪ್ಪ ಬಸ್ ಶೆಲ್ಟರ್ ನ ಪಕ್ಕದ ಮೋರಿ ಮೇಲೆ ಕುಳಿತ್ತಿದ್ದರು. ಈ ವೇಳೆ ಆರೋಪಿ, ಮಹಿಳೆಯ ಬಾಯಿ ಮುಚ್ಚಿ, ತಲೆಕೂದಲನ್ನು ಹಿಡಿದು ಎಳೆದು, ಮೈ ಮುಟ್ಟಿ ಮೋರಿಗೆ ತಳ್ಳಿ, ಮಾನಭಂಗಕ್ಕೆ ಪ್ರಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಹಿಳೆ ಕೂಗಿಕೊಂಡಾಗ ಸ್ಥಳೀಯರು ಸ್ಥಳಕ್ಕೆ ಬಂದಿದ್ದಾರೆ. ಮಾತ್ರವಲ್ಲ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ವಿಚಾರಣೆ ನಡೆಯುತ್ತಿದೆ.