ಕರಾವಳಿಕೊಡಗುರಾಜಕೀಯ

ಮಡಿಕೇರಿ: ಕಾಡಾನೆ ಘೀಳಿಗೆ ಹೆದರಿ ವಿದ್ಯುತ್ ಕಂಬಕ್ಕೆ ಗುದ್ದಿ ಕಾಲು ಮುರಿದುಕೊಂಡ ಯುವಕ..! ತುರ್ತಾಗಿ ಸ್ಪಂದಿಸಿದ ಶಾಸಕ ಪೊನ್ನಣ್ಣ..!

ನ್ಯೂಸ್ ನಾಟೌಟ್: ಕಾಡಾನೆಯ ಅಬ್ಬರದ ಘೀಳಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕನೊಬ್ಬ ಹೆದರಿಕೊಂಡು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿ ಕಾಲು ಮುರಿದುಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ಪುಲಿಯೇರಿ ಗ್ರಾಮದಲ್ಲಿ ನಡೆದಿದೆ. ಈ ಘಟನೆ ನಡೆದ ತಕ್ಷಣ ತುರ್ತಾಗಿ ಸ್ಪಂದಿಸಿದ ಶಾಸಕ ಪೊನ್ನಣ್ಣ ಕೆಪಿಸಿಸಿ ವಕ್ತಾರ ಸಂಕೇಂತ್ ಪೂವಯ್ಯ ಅವರನ್ನು ಆಸ್ಪತ್ರೆಗೆ ಕಳಿಸಿಕೊಟ್ಟು ಗಾಯಾಳು ಸುರೇಶ್‌ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಅಮ್ಮತ್ತಿಯ ಅಮೇರಿಕನ್ ಆಸ್ಪತ್ರೆಯಲ್ಲಿ ಸುರೇಶ್‌ ಗೆ ಚಿಕಿತ್ಸೆ ನೀಡಲಾಗುತ್ತಿದೆ.


ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದರೂ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಬೇಕಿದೆ ಎನ್ನುವುದನ್ನು ಸೋಚಿಸಿದ್ದಾರೆ. ಸೋಮವಾರ ಶಸ್ತ್ರಚಿಕಿತ್ಸೆ ನಡೆಸಲು ತೀರ್ಮಾನಿಸಲಾಗಿದೆ. ಘಟನೆ ಬಗ್ಗೆ ಶಾಸಕರು ಈಗಾಗಲೇ ಅರಣ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಸೂಕ್ತ ಪರಿಹಾರ ನೀಡಲು ಸೂಚಿಸಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಸ್ಥಳೀಯರಾದ ಎಸ್.ಹೆಚ್.ಮತೀನ್, ಜಾನ್‍ಸನ್, ಎನ್.ಎ.ನೌಶಾದ್, ಎ.ಡಿ.ದಿನೇಶ್, ದಿವಾಕರ್ ಮತ್ತಿರರು ಸಹಕರಿಸಿದ್ದಾರೆ. ಸ್ಥಳಕ್ಕೆ ಆರ್.ಎಫ್.ಓ ದೇವಯ್ಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಮಹಜರು ನಡೆಸಿದ್ದಾರೆ.

Related posts

ಗೂನಡ್ಕದಲ್ಲಿ ಹದಿನೈದು ಅಡಿ ಉದ್ದದ ಬೃಹತ್‌ ಹೆಬ್ಬಾವು ಸೆರೆ

ಬಡವರ ಬಗೆಗಿನ ಕಾಳಜಿಯೇ ಸೇವಾ ಸೌರಭ ಕಾರ್ಯಕ್ಕೆ ಶ್ರೀರಕ್ಷೆ : ಸ್ಪೀಕರ್‌ ಯು.ಟಿ. ಖಾದರ್

ವಿಟ್ಲ: ಜತೆಯಾಗಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ, ಪತಿ ಸಾವು, ಪತ್ನಿ ಗಂಭೀರ