ಕರಾವಳಿಕೊಡಗು

ಮಡಿಕೇರಿ:ದೇವರಕೊಲ್ಲಿ ಬಳಿ ಭೀಕರ ಅಪಘಾತ,ಇಬ್ಬರಿಗೆ ಗಂಭೀರ ಗಾಯ ಪ್ರಕರಣ; ಗಾಯಾಳುಗಳು ಸುಳ್ಯದ ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್: ಬೈಕ್ ಹಾಗೂ ಟ್ಯಾಂಕರ್‌ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಬಗ್ಗೆ ಇದೀಗ ವರದಿಯಾಗಿತ್ತು. ಮಡಿಕೇರಿ ಸಮೀಪದ ದೇವರಕೊಲ್ಲಿ ಬಳಿ ಭೀಕರ ಅಪಘಾತ ಸಂಭವಿಸಿದ್ದು,ಘಟನಾ ಸ್ಥಳಕ್ಕೆ ಸುಳ್ಯದಿಂದ ತುರ್ತಾಗಿ ಮೂರು ಆ್ಯಂಬುಲೆನ್ಸ್ ಗಳು ತೆರಳಿದ್ದವು.

ಇದೀಗ ಬೈಕ್‌ ನಲ್ಲಿದ್ದ ಇಬ್ಬರು ವ್ಯಕ್ತಿಗಳ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಅವರನ್ನು ಆ್ಯಂಬುಲೆನ್ಸ್‌ ಮೂಲಕ ಸುಳ್ಯ ಆಸ್ಪತ್ರೆಗೆ ಕರೆ ತರಲಾಗಿದೆ.ತುರ್ತು ಪರಿಸ್ಥಿತಿಯಲ್ಲಿ ಸಹಾಯಕ್ಕೆ ಸ್ಪಂದಿಸಿದ ಆ್ಯಂಬುಲೆನ್ಸ್‌ ಚಾಲಕರ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.ಘಟನೆಯಾಗಿ ಕೆಲವೇ ನಿಮಿಷಗಳಲ್ಲಿ ಆ್ಯಂಬುಲೆನ್ಸ್‌ ಚಾಲಕರು ಸ್ಥಳಕ್ಕೆ ಹಾಜರಾಗಿದ್ದು,ಕೂಡಲೇ ಗಾಯಾಳುಗಳನ್ನು ಸುಳ್ಯಕ್ಕೆ ಕರೆತಂದು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ.ಇದೀಗ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

ಸುಳ್ಯದಿಂದ ಮಡಿಕೇರಿ ತೆರಳುತ್ತಿದ್ದ ಬೈಕ್ ಹಾಗೂ ಮಡಿಕೇರಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಮಧ್ಯೆ ಅಪಘಾತ ಸಂಭವಿಸಿತ್ತು ಎಂದು ತಿಳಿದು ಬಂದಿದೆ.

Related posts

ಪುತ್ತೂರು: ಅಪ್ರಾಪ್ತ ಬಾಲಕಿಯರಿಗೆ ಬೀದಿ ಕಾಮಣ್ಣ ನಿಂದ ಲೈಂಗಿಕ ಕಿರುಕುಳ, ಶಾಲೆಯಿಂದ ಮನೆಗೆ ವಾಪಸ್ ಆಗುತ್ತಿದ್ದಾಗ ದುರ್ಘಟನೆ, ಓರ್ವನ ಬಂಧನ

ಸೌಜನ್ಯ ಕೇಸ್ : ಮಹತ್ವದ ಹೇಳಿಕೆ ನೀಡಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ,ಏನು ಹೇಳಿದ್ದಾರೆ ?

Praveen Nettaru ಹತ್ಯೆ ಪ್ರಕರಣದ ಆರೋಪಿಗಳಿಗೆ ಶರಣಾಗುವಂತೆ ಎಚ್ಚರಿಕೆ,ಸುಳ್ಯದಲ್ಲಿ ಆಟೋ ಏರಿ ಪ್ರಕಟಣೆ ಹೊರಡಿಸಿದ NIA