ಕರಾವಳಿಕೊಡಗು

ಮಡಿಕೇರಿ:ಸಿಲಿಂಡರ್‌ ಸ್ಪೋಟದ ಬೆಂಕಿಗೆ ವ್ಯಕ್ತಿ ದುರಂತ ಅಂತ್ಯ,ಆಶ್ರಮ ಆರಂಭಿಸಿ 36 ವೃದ್ಧರಿಗೆ ಆಶ್ರಯ ನೀಡಿದ್ದ ಆಶ್ರಯದಾತನಿಗೆ ಆಗಿದ್ದೇನು?

ನ್ಯೂಸ್ ನಾಟೌಟ್ : ಸಿಲಿಂಡರ್‌ ಸ್ಫೋಟಗೊಂಡು ದಂಪತಿ ಗಾಯಗೊಂಡಿದ್ದ ಘಟನೆಯೊಂದು ವರದಿಯಾಗಿತ್ತು.ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ತೊಂಡೂರಿನಲ್ಲಿ ಈ ಘಟನೆ ನಡೆದಿದ್ದು,ಇದೀಗ ಈ ಪ್ರಕರಣದಲ್ಲಿ ಚಿಕಿತ್ಸೆ ಫಲಿಸದೇ ವ್ಯಕ್ತಿಯೊಬ್ಬರು ಕೊನೆಯುಸಿರೆಳೆದಿದ್ದಾರೆಂದು ತಿಳಿದು ಬಂದಿದೆ.

ದುರಂತ ಅಂತ್ಯಕ್ಕೀಡಾದವರು ಮಡಿಕೇರಿಯ ರಮೇಶ್ (48) ಎಂದು ಗುರುತಿಸಲಾಗಿದೆ. ಇವರ ಪತ್ನಿಗೂ ಗಾಯಗಳಾಗಿದ್ದು,ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಇವರಿಗೆ ಚಿಕಿತ್ಸೆ ಮುಂದುವರಿದಿದೆ.

ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿ ಪತ್ನಿ ರೂಪಗೆ ಚಿಕಿತ್ಸೆ ಮುಂದುವರಿಸಲಾಗಿದೆ. ರಮೇಶ್ ಕಳೆದ 8 ವರ್ಷಗಳ ಹಿಂದೆ ವಿಕಾಸ್ ಜನಸೇವಾ ಟ್ರಸ್ಟ್ ನ ಆಶ್ರಮ ಆರಂಭಿಸಿ 36 ವೃದ್ಧರಿಗೆ ಆಶ್ರಯ ನೀಡಿದ್ದರು. ಆದರೆ, ಈಗ ಅವರೇ ಅಗ್ನಿ ಅವಘಡದಲ್ಲಿ ದುರಂತ ಅಂತ್ಯ ಕಂಡಿದ್ದು ನಿಜಕ್ಕೂ ಅರಗಿಸಿಕೊಳ್ಳಲಾಗದ ನೋವು ಎಲ್ಲರನ್ನು ಕಾಡುತ್ತಿದೆ.

Related posts

ಸುಳ್ಯ: ಕೊಡಗಿನ ನೆಲ್ಯಹುದಿಕೇರಿಯಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ..!ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ

ಮಡಿಕೇರಿ: ಮನೆ ಕಾಮಗಾರಿ ವೇಳೆ ಗುಡ್ಡದ ಮಣ್ಣು ಕುಸಿತ..!ಮೂವರು ಕಾರ್ಮಿಕರು ದುರಂತ ಅಂತ್ಯ

ವಿವಾಹಿತೆ ಶಿಕ್ಷಕಿ,ರೀಲ್ಸ್‌ ಸುಂದ್ರಿ ದೀಪಿಕಾ ಕೊಲೆ ಪ್ರಕರಣ;ಆರೋಪಿ ನಿತೀಶ್ ಪೊಲೀಸರೊಂದಿಗೆ ಬಾಯ್ಬಿಟ್ಟಿದ್ದೇನು?ಕೊಂದಿದ್ದು ಯಾಕೆ?ಇಲ್ಲಿದೆ ಡಿಟೇಲ್ಸ್‌