ಕೊಡಗುಕ್ರೈಂ

ಮಡಿಕೇರಿ:ಕಾರು ಮತ್ತು ಈಚರ್ ವಾಹನದ ನಡುವೆ ಡಿಕ್ಕಿ,ಕಾರು ಚಾಲಕ ಸಜೀವ ದಹನ

ನ್ಯೂಸ್ ನಾಟೌಟ್ :ಕಾರು ಮತ್ತು ಈಚರ್ ವಾಹನದ ನಡುವೆ ಡಿಕ್ಕಿ ಸಂಭವಿಸಿ ಅಗ್ನಿ ಕಾಣಿಸಿಕೊಂಡ ಪರಿಣಾಮ ಕಾರು ಚಾಲಕ ಸಜೀವ ದಹನವಾದ ಘಟನೆ  ಗುಂಡ್ಲುಪೇಟೆಯ ಹಿರೀಕಾಟಿ ಗೇಟ್ ಬಳಿ ನಡೆದಿದೆ.ಘಟನೆಯಲ್ಲಿ ಮೈಸೂರಿನ ಮುಜಾಮಿಲ್ ಅಹಮದ್(35) ಮೃತದುರ್ದೈವಿ.

ಈಚರ್ ವಾಹನದಲ್ಲಿದ್ದವರು ಹೊರಗೆ ಹಾರಿ ಪವಾಡ ಸದೃಶ ಪಾರಾಗಿದ್ದಾರೆ. ಈಚರ್ ವಾಹನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಚಾಮರಾಜನಗರ ಪೊಲೀಸ್ ವರಿಷ್ಟಾಧಿಕಾರಿ ಪದ್ಮಿನಿ ಸಾಹೋ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಭೂಕಂಪ ಆಗಿಲ್ಲ, ಜನತೆಗೆ ಆತಂಕ ಬೇಡ

ಆಕೆಯ ನಕಲಿ ಫೋಟೋ ಮತ್ತು ಮದುವೆ ಪ್ರಮಾಣಪತ್ರ ಸೃಷ್ಟಿಸಿದವರು ಪೊಲೀಸರ ಬಲೆಗೆ! ಇವರ ಖತರ್ನಾಕ್ ಪ್ಲಾನ್ ಹಿಂದಿದೆ ರೋಚಕ ಸ್ಟೋರಿ!

ಸೇತುವೆಯಿಂದ ಕೆರೆಗೆ ಬಿದ್ದ ಕಾಲೇಜು ವಿದ್ಯಾರ್ಥಿನಿ..! ಕೆರೆಗೆ ಧುಮುಕಿ ಆಕೆಯನ್ನು ರಕ್ಷಿಸಿದ ‘ಹೋಮ್ ಗಾರ್ಡ್’ ಸಿಬ್ಬಂದಿ