ನ್ಯೂಸ್ ನಾಟೌಟ್ : ಮಧ್ಯಪ್ರದೇಶದಲ್ಲಿ ಎಲ್‌ಪಿಜಿ ಗ್ಯಾಸ್ ತುಂಬಿದ್ದ ಗೂಡ್ಸ್ ರೈಲಿನ ಬೋಗಿಗಳು ಸಹ ಕಳಿ ತಪ್ಪಿರುವ ಘಟನೆ ಇಂದು(ಬುಧವಾರ) ವರದಿಯಾಗಿದೆ.
ಒಡಿಶಾದ ಬಾಲಾಸೂರ್ ಬಳಿ ನಡೆದ ರೈಲು ದುರಂತದ ನಡೆದ ಬಳಿಕ ದೇಶದ ಬೇರೆಲ್ಲಿಯೇ ರೈಲು ಅವಘಡಗಳಾದರೂ ಸುದ್ದಿಯಾಗುತ್ತಿದೆ. ಮಧ್ಯಪ್ರದೇಶದ ಜಬಲ್‌ಪುರದ ಶಹಪುರ ಭಿಟೋನಿಯಲ್ಲಿ ಗೂಡ್ಸ್ ರೈಲಿನ ಎಲ್‌ಪಿಜಿ ರೇಕ್‌ನ ಎರಡು ಬೋಗಿಗಳು ಹಳಿತಪ್ಪಿವೆ. ಅದೃಷ್ಟ ವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಈ ಕುರಿತು ಬುಧವಾರ ಬೆಳಗ್ಗೆ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಶ್ಚಿಮ ಸೆಂಟ್ರಲ್ ರೈಲ್ವೆ ಸಿಪಿಆರ್‌ಒ ನೀಡಿರುವ ಮಾಹಿತಿಯ ಪ್ರಕಾರ, ಗೂಡ್ಸ್ ರೈಲಿನಿಂದ ಸರಕು ಇಳಿಸಲು ನಿಲ್ಲಿಸುವ ವೇಳೆ ಮಂಗಳವಾರ ರಾತ್ರಿ 11.30 ಗಂಟೆಗೆ ಬೋಗಿಗಳು ಹಳಿ ತಪ್ಪಿದೆ ಎಂದುವರದಿ ತಿಳಿಸಿದೆ. ಒಂದು ವೇಳೆ ಎಲ್‌ಪಿಜಿ ತುಂಬಿದ ಬೋಗಿಗಳು ಉರುಳಿ ಬಿದ್ದಿದ್ದರೆ ಅಪಾರ ಹಾನಿ ಉಂಟಾಗುತ್ತಿತ್ತು. ಸ್ವಲ್ಪದರಲ್ಲಿಯೇ ಸಂಭವನೀಯ ಅಪಘಾತ ತಪ್ಪಿದೆ ಎಂದು ತಿಳಿದು ಬಂದಿದೆ.
ಘಟನೆ ನಡೆದ ಶಹಪುರ ಭಿಟೋನಿ ರೈಲು ನಿಲ್ದಾಣದ ಪಕ್ಕದಲ್ಲೇ ಭಾರತ್ ಪೆಟ್ರೋಲಿಯಂ ಡಿಪೋ ನಿಲ್ದಾಣವಿದೆ. ಇದರಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಸಂಗ್ರಹಣೆ ಮಾಡಲಾಗುತ್ತದೆ. ಬೋಗಿಗಳು ಹಳಿ ತಪ್ಪಿದ ನಂತರ ರೈಲ್ವೆ ಅಧಿಕಾರಿಗಳು ಬಂದು ಪರಿಶೀಲಿಸಿದರು. ಇದರಿಂದಾಗಿ ಶಹಪುರ ಸುತ್ತಮುತ್ತ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.