ನ್ಯೂಸ್ ನಾಟೌಟ್: ರಾಕಿಂಗ್ ಸ್ಟಾರ್ ಯಶ್ ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ರನ್ನು ಭೇಟಿಯಾಗಿದ್ದಾರೆ. ರಾಕಿಭಾಯ್ ಯಶ್ ಗೆ ಸಿಎಂ ಹೂಗುಚ್ಛ ಕೊಟ್ಟು ಸ್ವಾಗತಿಸಿದ್ದಾರೆ.
ಇಂದು (ಏ.21) ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲಕ್ಕೆ ಯಶ್ ಭೇಟಿ ನೀಡಿದ್ದರು. ಈ ವಿಚಾರ ತಿಳಿದು ಯಶ್ ಗೆ ಖುದ್ದಾಗಿ ಸಿಎಂ ಮೋಹನ್ ಯಾದವ್ ಆಹ್ವಾನ ನೀಡಿದ್ದಾರೆ.
ಅದರಂತೆ ಅವರನ್ನು ನಟ ಭೇಟಿಯಾಗಿದ್ದಾರೆ. ಇಬ್ಬರೂ ಖುಷಿಯಾಗಿ ಕುಳಿತು ಮಾತುಕತೆ ನಡೆಸುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯಶ್ ‘ರಾಮಾಯಣ’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಹಿನ್ನೆಲೆ ಚಿತ್ರೀಕರಣಕ್ಕೆ ಭಾಗಿಯಾಗುವ ಮುನ್ನ ಯಶ್ ಇಂದು (ಏ.21) ಶಿವನ ದೇಗುಲಕ್ಕೆ ಭೇಟಿ ನೀಡಿದ್ದಾರೆ. ದೇವರ ದರ್ಶನದ ಬಳಿನ ನಟ ಮಾತನಾಡಿ, ಬಹಳ ಖುಷಿ ಆಗುತ್ತಿದೆ.
ಶಿವನ ಆಶೀರ್ವಾದ ಪಡೆಯಲು ಬಂದೆ. ನಾನು ಚಿಕ್ಕಂದಿನಿಂದ ಶಿವನ ದೊಡ್ಡ ಭಕ್ತ. ನಮ್ಮ ಕುಲದೇವರು ಶಿವ. ಇಲ್ಲಿಗೆ ಬಂದಿರುವುದು ಸಂತಸ ತಂದಿದೆ. ದೇವರ ಸನ್ನಿಧಿಯಲ್ಲಿ ಧ್ಯಾನ ಮಾಡುತ್ತಾ ಕುಳಿತಾಗ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ಅದ್ಭುತ ಅನುಭವ ಸಿಕ್ಕಿದೆ ಎಂದು ಯಶ್ ಹೇಳಿದ್ದಾರೆ.